Ticker

6/recent/ticker-posts

ಸಂಟನಡ್ಕ ಶ್ರೀಜಟಾಧಾರಿ ಧೂಮಾವತಿ ದೈವಸ್ಥಾನ‌ ಬ್ರಹ್ಮಕುಂಭಾಭಿಷೇಕ ಹಾಗೂ ದೈವಗಳ ನೇಮೋತ್ಸವಕ್ಕೆ ಧ್ವಜಾರೋಹಣ

 


ಪೆರ್ಲ : ಸಂಟನಡ್ಕದ ಶ್ರೀಜಟಾಧಾರಿ ಧೂಮಾವತಿ ನಾಗ ಪರಿವಾರ ದೈವಗಳ ದೈವಸ್ಥಾನ  ಬ್ರಹ್ಮಕುಂಬಾಭಿಷೇಕ  ಹಾಗೂ ದೈವಗಳ ನೇಮೋತ್ಸವಕ್ಕೆ ಶನಿವಾರ ಧ್ವಜಾರೋಹಣಗೈಯಲಾಯಿತು. 

ಕಾಸರಗೋಡು ತಾಲೂಕು ಹಾಗೂ ವಿಟ್ಲ ಸೀಮೆಯ ಗಡಿ ಪ್ರದೇಶವಾದ ಬಾಡೂರು ಗ್ರಾಮದ ಸಂಟನಡ್ಕದಲ್ಲಿ ಸುಮಾರು ಎಂಟುನೂರು ವರ್ಷಗಳ ಹಿಂದೆ ಜಾಯಿಲೆ ಬೈದೆದಿ ಎಂಬ ದಿವ್ಯ ಮಾತೆಯಿಂದ ಸ್ಥಾಪಿಸಲ್ಪಟ್ಟ ಈ ದಿವ್ಯ ಕ್ಷೇತ್ರ ಪುನಃ ಪ್ರತಿಷ್ಠೆಗೊಂಡು 12 ವರ್ಷ ಪೂರ್ತಿಯಾಗುವ  ಈ ಶುಭ ಸಂದರ್ಭದಲ್ಲಿ ಎಪ್ರಿಲ್ 19 ರಿಂದ 28ರ ತನಕ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹಾಗೂ ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಅವರ ನೇತೃತ್ವದಲ್ಲಿ ಬ್ರಹ್ಮಕುಂಭಾಭಿಷೇಕ ಮತ್ತು ದೈ ಗಳ ನೇಮೋತ್ಸವ ಜರಗುತ್ತಿದೆ. ಇದರ ಅಂಗವಾಗಿ ಕುಂಞಣ್ಣ ಮಾಸ್ತರ್ ನೆಕ್ಕರೆಪದವು ಧ್ವಜಾರೋಹಣಗೈದರು. ಬಾಬು ಪೂಜಾರಿ ಕಾನ,ಈಶ್ವರ ನಾಯ್ಕ ನೀರೋಳ್ಯ, ವಿಶ್ವನಾಥ ಮುಂಚಿಕಾನ, ಸೇವಾ ಸಮಿತಿ, ಯುವಕ ಸಂಘ ಹಾಗೂ ಮಾತೃ ಸಂಘದ ಪದಾಧಿಕಾರಿಗಳು, ಕುಟುಂಬಸ್ಥರು ಪಾಲ್ಗೊಂಡಿದ್ದರು. ಬಳಿಕ ಜಟಾಧಾರಿ ಧೂಮಾವತಿ ದೈವದ ನೇಮೋತ್ಸವಕ್ಕೆ ಗೊನೆ ಮುಹೂರ್ತ,

ಉಲ್ಲಾಕ್ಲು ದೈವದ ಭಂಡಾರ ಸಮರ್ಪಣೆ, ಉಳ್ಳಾಲ್ತಿ ಉಲ್ಲಾಕ್ಲು ದೈವದ ತಂಬಿಲ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಜರಗಿತು. ಈ ಸಂದರ್ಭದಲ್ಲಿ ಶ್ರೀ ಜಟಾಧಾರಿ ಧೂಮಾವತಿ ಯುವಕ ಸಂಘದ ವತಿಯಿಂದ ಉತ್ಸವದ ಪ್ರಯುಕ್ತ ನೂತನ‌ ಸಮವಸ್ತ್ರ ಬಿಡುಗಡೆಗೊಳಿಸಲಾಯಿತು. 

Post a Comment

0 Comments