Ticker

6/recent/ticker-posts

ಮನೆಯಿಂದ 1500 ತೆಂಗಿನಕಾಯಿ ಕಳವು, ಪೊಲೀಸರಿಗೆ ದೂರು


 ನೀರ್ಚಾಲು: ಇಲ್ಲಿಗೆ ಸಮೀಪದ ಗೋಳಿಯಡ್ಕದಲ್ಲಿ ಮನೆಯಿಂದ 1500 ತೆಂಗಿನಕಾಯಿ ನಾಪತ್ತೆಯಾಗಿದೆ. ಗೋಳಿಯಡ್ಕದ ನಾಸರ್  ಎಂಬವರ ತರವಾಡು ಮನೆಯಲ್ಲಿ ಇಡಲಾಗಿದ್ದ ತೆಂಗಿನಕಾಯಿ ನಾಪತ್ತೆಯಾಗಿದೆ.  ತೆಂಗಿನಕಾಯಿಗೆ ಬೆಲೆ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಮಾರಾಟ ಮಾಡುವ ಸಲುವಾಗಿ ಬಾಗಿಲು ತೆರೆದು ನೋಡಿದಾಗ ತೆಂಗಿನ ಕಾಯಿ ಕಣ್ಮರೆಯಾಗಿತ್ತು. ಇಲ್ಲಿನ ಪರಿಸರದ ಮನೆಗಳಿಂದ ಕೋಳಿ, ಪಾತ್ರೆಗಳು, ಚಪ್ಪಲಿ ಎಂಬಿವು ಸಹ ಕಣ್ಮರೆಯಾಗಿವೆ.

ಗೋಳಿಯಡ್ಕ ಪರಿಸರಗಳಲ್ಲಿ ಹಳೆಯ ಮನೆಗಳನ್ನು ಇತರ ರಾಜ್ಯ ಕಾರ್ಮಿಕರಿಗೆ ಬಾಡಿಗೆಗೆ ನೀಡಲಾಗುತ್ತಿದೆ.  ಇಲ್ಲಿ ಬಂದು ಸೇರಿರುವವರು ಕಳವು ಕೃತ್ಯ ಎಸಗಿರಬಹುದೇ ಎಂಬ ಶಂಕೆ ಬಲವಾಗಿದೆ. ಯಾವುದೇ ದಾಖಲೆ ಪಡೆಯದೆಯೇ ಮನೆಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ ಎಂದೂ ಸಹ ತಿಳಿದು ಬಂದಿದೆ. ಮನೆಗಳನ್ನು ಬಾಡಿಗೆಗೆ ಪಡೆಯುವವರ ದಾಖಲೆ ಸಹಿತ ಮಾಹಿತಿಗಳನ್ನು ಸಮೀಪದ ಪೊಲೀಸ್ ಠಾಣೆಗಳಿಗೆ ನೀಡಬೇಕೆಂಬ ಕಾನೂನು ಸಹ ಯಾರೂ ಪಾಲಿಸುತ್ತಿಲ್ಲ.

Post a Comment

0 Comments