Ticker

6/recent/ticker-posts

ಶೂ ಧರಿಸಿ ಶಾಲೆಗೆ ಬಂದ ಪ್ಲಸ್ ವನ್ ವಿದ್ಯಾರ್ಥಿಯ ಮೇಲೆ‌ ಪ್ಲಸ್ ಟೂ ವಿದ್ಯಾರ್ಥಿಗಳಿಂದ ಹಲ್ಲೆ; 6 ಮಂದಿಯ ವಿರುದ್ದ ಕೇಸು ದಾಖಲು


 ಮುಳ್ಳೇರಿಯ: ಶೂ ಧರಿಸಿ ಶಾಲೆಗೆ ಬಂದ ಪ್ಲಸ್ ವನ್ ವಿದ್ಯಾರ್ಥಿಯನ್ನು ನಿರಂತರವಾಗಿ ಹಲ್ಲೆಗೈದ ಪ್ರಕರಣ ನಡೆದಿದೆ. ಆದೂರು ಸರಕಾರಿ  ಹಯರ್ ಸೆಕಂಡರಿ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದು  ಈ ಘಟನೆಗೆ ಸಂಬಂಧಿಸಿದಂತೆ 6 ಮಂದಿ ಪ್ಲಸ್ ಟು ವಿದ್ಯಾರ್ಥಿಗಳ ವಿರುದ್ದ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಶಾಲೆಯ ಆಂಟಿ ರಾಗಿಂಗ್ ಸಮಿತಿಯ ವರದಿಯಂತೆ  ರಾಗಿಂಗ್ ವಿರುದ್ದ ಕಾಯ್ದೆ ಬಳಸಿ ಕೇಸು ದಾಖಲಿಸಲಾಗಿದೆ.

   ಜೂನ್ 20 ರಂದು ಪ್ಲಸ್ ವನ್ ವಿದ್ಯಾರ್ಥಿಗೆ ಹಲ್ಲೆಗೈಯ್ಯಲಾಗಿತ್ತು. ಭಯದಿಂದಾಗಿ ವಿದ್ಯಾರ್ಥಿ ಯಾರಲ್ಲೂ ಹೇಳಿರಲಿಲ್ಲ. ಆದರೆ ನೋವು ಹೆಚ್ಚಾದ ವಿದ್ಯಾರ್ಥಿ ಮನೆಯವರಲ್ಲಿ ಹೇಳಿದ್ದನು. ಅನಂತರ ವಿದ್ಯಾರ್ಥಿಯನ್ನು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಇದೇ ವೇಳೆ ಆದೂರು ಪೊಲೀಸರಿಗೂ ಶಾಲಾ ಪ್ರಾಂಶುಪಾಲರಿಗೂ ದೂರು ನೀಡಲಾಯಿತು. ಪೊಲೀಸರ ಸೂಚನೆಯಂತೆ ಶಾಲೆಯ ಆಂಟಿ ರಾಗಿಂಗ್ ಸಮಿತಿ  ತನಿಖೆ ನಡೆಸಿ ವರದಿ ಸಲ್ಲಿಸಿತು. ಅದರಂತೆ ಪೊಲೀಸರು ಕೇಸು ದಾಖಲಿಸಿದರು. ಪ್ಲಸ್ ವನ್ ತರಗತಿ ಆರಂಭಗೊಂಡ 2 ನೇ ದಿನ ಈ ಘಟನೆ ನಡೆದಿತ್ತು. ಬೆಳಗ್ಗೆ ಬಿಡುವಿನ ವೇಳೆಯಲ್ಲೂ ಮದ್ಯಾಹ್ನ ತರಗತಿಯಲ್ಲೂ ಸಂಜೆ ಬಸ್ಸು ನಿಲ್ದಾಣದಲ್ಲೂ ಹಲ್ಲೆ ನಡೆದಿತ್ತು.

Post a Comment

0 Comments