Ticker

6/recent/ticker-posts

ತೀವ್ರ ಜ್ವರದಿಂದ ಬಳಲುತ್ತಿದ್ದ 7 ವರ್ಷದ ಬಾಲಕಿ ಮೃತ್ಯು


 ಕಾಸರಗೋಡು: ತೀವ್ರ ಜ್ವರದಿಂದಾಗಿ 7 ವರ್ಷದ ಬಾಲಕಿ‌‌ ಮೃತಪಟ್ಟ ಘಟನೆ ನಡೆದಿದೆ. ಪಾಣಲಂ ನಿವಾಸಿ, ಮಂಗಳೂರಿನಲ್ಲಿ ವ್ಯಾಪಾರಿಯಾಗಿರುವ ಉಮ್ಮರ್- ನಸೀಬ ದಂಪತಿಯ ಪುತ್ರಿ, ಬದಿರ ಎ.ಯು.ಪಿ. ಶಾಲೆಯ 2 ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಶಬಾನಾ(7) ಮೃತಪಟ್ಟ ಬಾಲಕಿ. ತೀವ್ರ ತಲೆನೋವು ಹಾಗೂ ಜ್ವರದಿಂದಾಗಿ ಎರಡು ದಿನಗಳಿಂದ ಚಿಕಿತ್ಸೆ ಪಡೆಯಲಾಗಿತ್ತು. ನಿನ್ನೆ (ಶುಕ್ರವಾರ) ಜ್ವರ ಉಲ್ಬಣಗೊಂಡಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ರಕ್ಷಿಸಲಾಗಲಿಲ್ಲ. ಬದಿರ ಶಾಲೆಗೆ ಇಂದು (ಶನಿವಾರ) ರಜೆ ಸಾರಲಾಗಿದೆ

Post a Comment

0 Comments