Ticker

6/recent/ticker-posts

ಕಳಪೆ ಕಾಮಗಾರಿ ಆರೋಪ: ಪೆರಡಾಲ ಕೊರಗ ಕಾಲನಿಯಲ್ಲಿ ಪೂರ್ತಿಗೊಳ್ಳುವ ಮೊದಲೇ‌ ಕುಸಿದ ಮನೆ


 ಬದಿಯಡ್ಕ: ಕಳಪೆ ಕಾಮಗಾರಿಯಿಂದಾಗಿ ಪೆರಡಾಲ ಕೊರಗ ಕಾಲನಿಯಲ್ಲಿ ನಿರ್ಮಾಣ ಪೂರ್ಣಗೊಳ್ಳುವ ಮೊದಲೇ ಮನೆ ಕುಸಿದು ಬಿದ್ದ ಘಟನೆ ನಡೆದಿದೆ. ಬದಿಯಡ್ಕ ಪಂಚಾಯತಿನ 14 ನೇ ವಾರ್ಡು ವ್ಯಾಪ್ತಿಯಲ್ಲಿರುವ ಪೆರಡಾಲ ಕೊರಗ  ಕಾಲನಿಯಲ್ಲಿ ಪರಿಶಿಷ್ಟ ವರ್ಗ ಅಭಿವೃದ್ದಿ ಇಲಾಖೆಯ ಆಶ್ರಯದಲ್ಲಿ ಲೈಫ್ ಯೋಜನೆಯಂತೆ ನಿರ್ಮಾಣ ಆರಂಭಿಸಿದ‌ ಮನೆ ಭಾರೀ ಮಳೆಯಲ್ಲಿ ಕುಸಿದು ಬಿದ್ದಿದೆ. ಮನೆಯ ವರಾಂಡದಲ್ಲಿ  ನಿರ್ಮಿಸಿದ ಲಿಂಡಲಿಗೆ ಅಗತ್ಯದ ಕಬ್ಬಿಣ ಬಳಸದಿರುವುದೇ ಈ ದುರಂತಕ್ಕೆ ಕಾರಣವೆಂದು ಹೇಳಲಾಗುತ್ತಿದೆ.


 ಅಡಿಪಾಯದಲ್ಲಿ ಕಾಂಕ್ರೀಟ್ ಹಾಕುವ ಬದಲು ಕೆಂಪು ಕಲ್ಲು ಹಾಸಿ ಮನೆ ನಿರ್ಮಿಸಲಾಗಿದೆಯೆಂದು ಸ್ಥಳೀಯರು ದೂರಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವ‌ ಮೊದಲೇ ಕುಸಿದು ಬಿದ್ದ ಕಾರಣ ಸಾವು ನೋವು ಸಂಭವಿಸಿಲ್ಲ. ಕಳಪೆ ಗುಣಮಟ್ಟದ ಕಲ್ಲು,ಕಬ್ಬಿಣ ಈ ಮನೆ ನಿರ್ಮಾಣಕ್ಕೆ ಬಳಸಲಾಗಿದೆ. ಅಲ್ಲದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಸುಳಿಯಲೇ ಇಲ್ಲ ಎಂದೂ ದೂರಲಾಗಿದೆ

Post a Comment

0 Comments