Ticker

6/recent/ticker-posts

ಮಂಜೇಶ್ವರದಲ್ಲಿ ಆ.11ಕ್ಕೆ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವ - ಆಮಂತ್ರಣ ಪತ್ರಿಕೆ ಮಂತ್ರಾಲಯದಲ್ಲಿ ಬಿಡುಗಡೆ.

 


ಮಂಜೇಶ್ವರ: ರಾಯರ ಭಕ್ತರು ಮಂಜೇಶ್ವರ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವ ಆಚರಣೆಯು ಆಗಸ್ಟ್ 11 ರಂದು ಸೋಮವಾರ ವಿವಿಧ, ವೈದಿಕ ಕಾರ್ಯಕ್ರಮಗಳೊಂದಿಗೆ ಮಂಜೇಶ್ವರ ಹೊಸಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಜರುಗಲಿದ್ದು, ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ವೃಂದಾವನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶ್ರೀ ಗುರುಗಳವರ ಆಶೀರ್ವಾದದ ಮಂತ್ರಾಕ್ಷತೆಯನ್ನು ನೀಡಿ ಬಳಿಕ ಕ್ಷೇತ್ರದ ಲಕ್ಷ್ಮಿ ವೆಂಕಟ್ರಮಣ ದೇವಸ್ಥಾನದ ದಿವ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು. ಈ ವೇಳೆ ಶ್ರೀ ಪಾದಆಚಾರ್ಯರು, ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಲಕ್ಷ್ಮೀಶ ಬೈಪಡಿತ್ತಾಯ, ಪ್ರಧಾನ ಋತ್ವಿಜರಾದ: ಯಾದವ ಶರ್ಮಾ ಮಂಗಳೂರು, ರಾಯರ ಭಕ್ತರು ಮಂಜೇಶ್ವರದ ಸಂಸ್ಥಾಪಕರಾದ: ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ರಾಜೇಶ್ ಕಡಂಬಾರು ಉಪಸ್ಥಿತರಿದ್ದರು. ಅಪರೋಕ್ಷ ಜ್ಞಾನಿಗಳು, ಕಲಿಯುಗದ ಕಾಮಧೇನುಗಳಾದ ಶ್ರೀ ರಾಘವೇಂದ್ರ ಸ್ವಾಮಿಗಳವರು ಮಂತ್ರಾಲಯದಲ್ಲಿ ವೃಂದಾವಸ್ಥರಾಗಿ ಆಗಸ್ಟ್ 11 ಕ್ಕೆ ಭರ್ತಿ 354 ವರ್ಷಗಳು ತುಂಬುತ್ತಿವೆ. ಮಂತ್ರಾಲಯ ಸೇರಿದಂತೆ ದೇಶ ವಿದೇಶಗಳಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಗಳಲ್ಲಿ ಆರಾಧನಾ ಮಹೋತ್ಸವ ವಿವಿಧ ಪೂಜೆ ಪುನಸ್ಕಾರ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಲಿವೆ. ಅದೇ ರೀತಿ ಮಂಜೇಶ್ವರದ ಹೊಸಬೆಟ್ಟು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾ ಭವನದಲ್ಲಿ ರಾಯರ ಭಕ್ತರ ವತಿಯಿಂದ ನಡೆಯುವ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಗಸ್ಟ್ 11 ರಂದು ಸೋಮವಾರ ಬೆಳಗ್ಗೆ 9.00 ರಿಂದ ಸ್ಥಳ ಶುದ್ಧಿ, ಪ್ರಾರ್ಥನೆ, ಶ್ರೀ ಗುರು ರಾಯರ ವಿಶೇಷ ಪಾದಪೂಜೆ, ಮಹಾ ಮಂಗಳಾರತಿ, ಪ್ರಸಾದ ವಿತರಣೆ, ಲಘು ಉಪಾಹಾರ ವಿತರಣೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರದ್ದೆ, ಭಕ್ತಿಯಿಂದ ಪಾಲ್ಗೊಂಡು ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಮಂತ್ರಾಕ್ಷತೆಯ ಪ್ರಸಾದವನ್ನು ಸೀಕರಿಸಬೇಕಾಗಿ ರಾಯರ ಭಕ್ತರು ಮಂಜೇಶ್ವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Post a Comment

0 Comments