Ticker

6/recent/ticker-posts

ಶಾಲಾ ಕಟ್ಟಡದ ಮೇಲಕ್ಕೆ ಬಿದ್ದ ಚಪ್ಪಲಿ ಹೆಕ್ಕುವ ವೇಳೆ ಶಾಕ್ ತಗುಲಿ 8 ನೇ ತರಗತಿ ವಿದ್ಯಾರ್ಥಿ ಮೃತ್ಯು


 ಶಾಲೆಯ ಕಟ್ಟಡದ ಮೇಲಕ್ಕೆ ಬಿದ್ದ ಚಪ್ಪಲಿ ಹೆಕ್ಕುವ ವೇಳೆ ಶಾಕ್ ಬಡಿದು 8 ನೇ ತರಗತಿ ವಿದ್ಯಾರ್ಥಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕೊಲ್ಲಂ ತೇವಲಕ್ಕರ ಬಾಯ್ಸ್ ಶಾಲೆಯ ವಿದ್ಯಾರ್ಥಿ ಮಿಥುನ್ (13) ಮೃತಪಟ್ಟ ಬಾಲಕ. ಇಂದು (ಗುರುವಾರ) ಬೆಳಗ್ಗೆ ಮಕ್ಕಳು ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದಾಗ ಮಿಥುನ್ ನ ಚಪ್ಪಲಿ ಶಾಲಾ ಕಟ್ಟಡದ ಮೇಲಕ್ಕೆ ಎಸೆಯಲ್ಪಟ್ಟಿತು.  ಚಪ್ಪಲಿ ತೆಗೆಯಲೆಂದು ಮೇಲಕ್ಕೆ ಹೋದಾಗ  ಕಟ್ಟಡದ ಮೇಲೆಯೇ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ ಶಾಕ್ ತಗುಲಿತೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಶಿಕ್ಷಣ ಇಲಾಖೆ ಹಾಗೂ ವಿದ್ಯುತ್ ಇಲಾಖೆ ಆದೇಶ ನೀಡಿದೆ.

Post a Comment

0 Comments