Ticker

6/recent/ticker-posts

ಕಳವು ನಡೆಸಲು ಮನೆಗೆ ಪ್ರವೇಶಿಸಿ ಮಲಗಿ ನಿದ್ರಿಸುತ್ತಿದ್ದ ಮಗುವಿಗೆ ಮೆಟ್ಟಿ ಪರಾರಿಯಾದ ಕಳ್ಳನ ಬಂಧನ


 ಕುಂಬಳೆ:  ಕಳವು ಯತ್ನದ ಮಧ್ಯೆ ಮಲಗಿ‌ ನಿದ್ರಿಸುತ್ತಿದ್ದ ಪುಟ್ಟ ಮಗುವಿಗೆ ಮೆಟ್ಟಿದ ಕಳ್ಖ ಮನೆಯವರು ಎಚ್ಚರವಾದಾಗ ಪರಾರಿಯಾದ ಘಟನೆ ನಡೆದಿದೆ. ಇದಕ್ಕೆ ಸಂಬಂದಪಟ್ಟಂತೆ ಓರ್ವನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ‌ಕಯ್ಯಾರು ಜೋಡುಕಲ್ಲು ಬಳಿಯ  ಕೆ.ಕೆ.ನಗರ ನಿವಾಸಿ ಹಾಗೂ ಕುಬಣೂರು ಸಫ ನಗರದ ಮನೆಯಲ್ಲಿ ವಾಸಿಸುವ‌ ಕಲಂದರ್ ಶಾಫಿ(34) ಬಂಧಿತ ಆರೋಪಿ. ಕುಂಬಳೆ ಎಸ್.ಐ.ಕೆ.ಶ್ರೀಜೇಶ್ ಹಾಗೂ ತಂಡ ಆರೋಪಿಯನ್ನು ಬಂಧಿಸಿದೆ. ಜೋಡುಕಲ್ಲು‌ ನಿವಾಸಿ ಕೆ.ಹರೀಶರ ‌ಮನೆಯಲ್ಲಿ ನಿನ್ನೆ (ಶುಕ್ರವಾರ) 3.30 ರ ವೇಳೆ ಮುಂಜಾನೆ ಈ ಘಟನೆ ‌ನಡೆದಿದೆ. ಹರೀಶರ ಮನೆಯ ಹಿಂಬಾಗದ ಬಾಗಿಲು ಬಲವಾಗಿ ತೆರೆದು ಒಳಗೆ ಪ್ರವೇಶಿಸಿದ ಕಲಂದರ್ ಶಾಫಿ, ಕಳವಿಗೆ ಯತ್ನದಸುತ್ತಿರುವ ಮಧ್ಯೆ ಮಲಗಿ ನಿದ್ರಿಸುತ್ತಿದ್ದ ಮಗುವೆಗೆ ಮೆಟ್ಟಿದ್ದನು. ಈ ವೇಳೆ ಮಗು ಜೋರಾಗಿ ಅಳತೊಡಗಿದ್ದು ಆರೋಪಿ ಹೊರಗಿಳಿದು ಓಡಿದ್ದಾನೆ.ಮನೆಯವರು ಹಿಂಬಾಲಿಸುತ್ತಿದ್ದಂತೆಯೇ ಆರೋಪಿ ತಾನು ಬಂದಿದ್ದ ಆಟೋ ಏರಿ ಪರಾರಿಯಾಗಿದ್ದನು. ಈ ಬಗ್ಗೆ ಹರೀಶ್ ನೀಡಿದ ದೂರಿನಂತೆ ಪರಿಸರದ ಸಿ.ಸಿ‌ ಕ್ಯಾಮರಾಗಳನ್ನು ಪರಿಶೋಧಿಸಿದ ಪೊಲೀಸರು ಆಟೋ ರಿಕ್ಷಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ

Post a Comment

0 Comments