Ticker

6/recent/ticker-posts

ಕಾರಿನಲ್ಲಿ ಸಾಗಿಸುತ್ತಿದ್ದ 25 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯ ವಶ, ಚಾಲಕ ಪರಾರಿ‌


 ಕಾಸರಗೋಡು: ಓಣಂ ಹಬ್ಬದ ವಿಶೇಷ ಕಾರ್ಯಾಚರಣೆಯಂತೆ ಅಬಕಾರಿ ಅಧಿಕಾರಿಗಳು  25.92 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ವಶಪಡಿಸಿದ್ದಾರೆ. ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ ಕೆ.ವಿ.ಸುರೇಶ್ ಅವರು ನೀಡಿದ ಮಾಹಿತಿಯಂತೆ ಕಾಸರಗೋಡು ಎಕ್ಸೈಸ್ ರೇಂಜ್ ಆಫೀಸಿನ ಪ್ರಿವೆಂಟಿವ್ ಆಫೀಸರ್ ಕೆ.ವಿ.ರಂಜಿತ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ. ಕೂಡ್ಲು ಬಳಿಯ ಸೂರ್ಲು ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ ಮದ್ಯ ವಶಪಡಿಸಲಾಗಿದೆ. ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಓಡಿ ಪರಾರಿಯಾಗಿದ್ದಾರೆ. ಎಕ್ಸೈಸ್ ಅಧಿಕಾರಿಗಳಾದ ಪ್ರಶಾಂತ್ ಕುಮಾರ್, ಅಮಲ್ ಜಿತ್, ಶಂಶುದ್ದೀನ್, ಅಶ್ವತಿ ವಿ.ವಿ, ಚಾಲಕ ಮೈಕಲ್ ಜೋಸೆಫ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments