Ticker

6/recent/ticker-posts

ಕುಂಟಿಕಾನ ಅನುದಾನಿತ ಹಿರಿಯ ಬನಾದಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ


 ಕುಂಟಿಕಾನ ಅನುದಾನಿತ ಹಿರಿಯ ಬನಾದಿ ಶಾಲೆ ಕುಂಟಿಕಾನದಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮದಿಂದ ಜರಗಿತು. ಸಭೆಯ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಕಮರುದ್ದೀನ್ ಪಾಡ್ಲಡ್ಕ ವಹಿಸಿದ್ದರು.ಕಾರ್ಯಕ್ರಮವನ್ನು ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಯಂ ಉದ್ಘಾಟಿಸಿದರು .ಸಭೆಯಲ್ಲಿ ವ್ಯವಸ್ಥಾಪಕರಾದ ಶಂಕರನಾರಾಯಣ ಶರ್ಮ ಶಾಲಾ ಅಧ್ಯಾಪಕರಾದ ಶರತ್ ಕುಮಾರ್ ಎಂ ,ಆಲ್ವಿನ್ ಜಾರ್ಜ್, ಮಾತೃ ಸಂಘದ ಅಧ್ಯಕ್ಷೆ ಆಶಾ ಮೋಳ್ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ಎ ರಾಧಾಕೃಷ್ಣನ್ ಸ್ವಾಗತಿಸಿದರೆ ಅಧ್ಯಾಪಕ ಪ್ರದೀಪ್ ಕುಮಾರ್ ವೈ ಆರ್ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು ಸಿಹಿ ತಿಂಡಿ ವಿತರಣೆಯೂ ಜರಗಿತು.

Post a Comment

0 Comments