Ticker

6/recent/ticker-posts

ರಾಷ್ಟ್ರೀಯ ಹೆದ್ದಾರಿಯ ಅಡ್ಕತ್ತಬೈಲು, ಕನಿಲ, ಐಲ, ಬಂಗ್ರ ಮಂಜೇಶ್ವರಗಳಲ್ಲಿ ಪಾದಾಚಾರಿ ಮೇಲ್ಸೇತುವೆ ಬೇಕು; ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಬಿಜೆಪಿ ಕೋಜಿಕ್ಕೋಡ್ ವಲಯ ಉಪಾಧ್ಯಕ್ಷ ವಿಜಯ್ ರೈ ಮನವಿ


 ನವದೆಹಲಿ: ಕಾಸರಗೋಡು ಜಿಲ್ಲೆಯ ಹಲವಾರು ಕಡೆ ಪಾದಚಾರಿಗಳಿಗೆ ರಸ್ತೆ ದಾಟಲು ಅನಾನುಕೂಲವಾಗುತ್ತಿದೆ.  ಕಾಸರಗೋಡಿನ ಅಡ್ಕತ್ತಬೈಲ್,ಮಂಜೇಶ್ವರ ಭಾಗದ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿ, ಕನಿಲ ಶ್ರೀ ಭಗವತಿ ಕ್ಷೇತ್ರದ ಬಳಿ, ಹಾಗೂ ಬಂಗ್ರಮಂಜೇಶ್ವರದಲ್ಲಿ ಫೂಟ್ ಓವರ್ ಬ್ರಿಡ್ಜ್ (Foot over  Bridge ) ನಿರ್ಮಿಸಲು ಬಿಜೆಪಿ ಕೋಜಿಕ್ಕೋಡು ವಲಯ ಉಪಾಧ್ಯಕ್ಷ ವಿಜಯ ರೈ ಅವರು ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದರು. ದೆಹಲಿಯಲ್ಲಿ ಸಾರಿಗೆ ಸಚಿವರ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಲಾಯಿತು.  ಮಂಗಳೂರು ಸಂಸದರಾದ ಬ್ರಿಜೇಶ್ ಚೌಟ ಅವರು  ಜತೆಯಲ್ಲಿ‌ದ್ದರು.

Post a Comment

0 Comments