ಬದಿಯಡ್ಕ : ಮಲಬಾರ್ ದೇವಸ೦ ಬೋರ್ಡ್ ಗೆ ಒಳಪಟ್ಟ ಶ್ರೀ ಮಹಾವಿಷ್ಣು ದೇವಸ್ಥಾನ ಕಾರ್ಮಾರು ಮಾನ್ಯ ಇದರ ಆಡಳಿತ ಮೊಕ್ತೇಸರರಾಗಿ ಆಯ್ಕೆಯಾದ ರಾಧಾಕೃಷ್ಣ ರೈ ಕಾರ್ಮಾರು ಇವರನ್ನು ಬದಿಯಡ್ಕ ಬಂಟರ ಸಂಘದ ಆಟಿದ ಕೂಟ ಬಂಟರ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕೊಡುಗೈ ದಾನಿ ಡಾ. ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಶಾಲು, ಸ್ಮರಣೆಕೆ ನೀಡಿ ಸನ್ಮಾನಿಸಿದರು.. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಶ್ರೀ ಸುಬ್ಬಯ್ಯ ರೈ, ಉಪಾಧ್ಯಕ್ಷ ಪಿಜಿ ಚಂದ್ರಹಾಸ ರೈ, ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ ರೈ ಪೆರಡಾಲ
ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಜಗನ್ನಾಥ ರೈ ಕೊರೆಕ್ಕಾನ ದಯಾನಂದ ರೈ ಸಹಿತ ಗಣ್ಯರು ಉಪಸ್ಥಿತರಿದ್ದರು
0 Comments