ಉಳಿಯತ್ತಡ್ಕ: ಮೊಗೇರ ಸರ್ವೀಸ್ ಸೊಸ್ಯೈಟಿ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕದ ನೇತೃತ್ವದಲ್ಲಿ ವೈವಿಧ್ಯ ಕಾರ್ಯಕ್ರಮಗಳಂದಿಗೆ ಉಳಿಯತ್ತಡ್ಕ ಅಟಲ್ ಸಭಾಭವನದಲ್ಲಿ ಆಟಿ ಆಚರಣೆ ನಡೆಯಿತು.
ಬೆಳಿಗ್ಗೆ ಮೂಲಸ್ಥಾನದ ದೈವದೇವರುಗಳಿಗೆ ಮತ್ತು ಮೂರು ಮಾತಿಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಕು. ನೇಹಾ ಮೋಹನ್ ಅವರ ಪೂಜಾ ನೃತ್ಯದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಮಧೂರು ಗ್ರಾ. ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಮೊಗೇರ ಸಂಘಟನೆಯ ಅಧ್ಯಕ್ಷ ಚಂದ್ರ ಸಿ. ಬಿ. ಅಡೂರು ಅಧ್ಯಕ್ಷತೆ ವಹಿಸಿದರು.
ಮಧೂರು ಗ್ರಾ. ಪಂ. ಸದಸ್ಯ ಉಮೇಶ ಗಟ್ಟಿ, ಮೊಗೇರ ಸರ್ವೀಸ್ ಸೊಸೈಟಿ ರಾಜ್ಯಾಧ್ಯಕ್ಷ ಲಕ್ಷ್ಮಣ ಪೆರಿಯಡ್ಕ, ಕಾಸರಗೋಡು ಸರಕಾರಿ ಕಾಲೇಜು ಪ್ರಾಧ್ಯಾಪಿಕೆ ಡಾ. ಆಶಾಲತ ಚೇವಾರ್ ಮಾತನಾಡಿದರು. ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ ಸಂದೇಶ ಅವರು ಮೊಗೇರೆರ್ ಕೋಡೆ – ಇನಿ – ಎಲ್ಲೆ ಎಂಬ ವಿಷಯದಲ್ಲಿ ವಿಚಾರಗೋಷ್ಟಿ ನಡೆಸಿಕೊಟ್ಟರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪ್ಲಸ್ ಟು ತರಗತಿಗಳಲ್ಲಿ ಉನ್ನತ ಅಂಶಗಳೊಂದಿಗೆ ತೇರ್ಗಡೆಯಾದ ಮೊಗೇರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.
ಭಜನಾರ್ಥಿ ಪುರುಷೋತ್ತಮ ಕಾಳ್ಯಂಗಾಡ್, ಮೊಗೇರ ಸಮಾಜ ಸಂಘಟಕ ಚಂದ್ರ ಸಿ. ಬಿ. ಅಡೂರು, ಕವಯತ್ರಿ ಸುಜಯ ಸಜಂಗದ್ದೆ, ರಾಷ್ಟ್ರೀಯ ಕ್ರೀಡಾ ತಾರೆ ಕು. ಅಶ್ವಿನಿ ಬಾಯಾರ್, ಕು. ಶ್ರಾವ್ಯ ಕನಿಯಾಲ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮೊಗೇರ ಸರ್ವೀಸ್ ಸೊಸೈಟಿ ರಾಜ್ಯ ಉಪಾಧ್ಯಕ್ಷ ಬೇಡು ಎ. ಪಿ. ಸ್ವಾಗತಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಕೆ. ಸ್ವಾಮಿಕೃಪಾ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಪಾಡಿ ವಂದಿಸಿದರು. ಮೊಗೇರ ದುಡಿ ನಲಿಕೆ ಕಾಯಿಮಲೆ ಬೆಳ್ಳೂರು ತಂಡದವರಿಂದ ನಡೆದ ದುಡಿ ಕುಣಿತ ಜನಮನ ರಂಜಿಸಿತು. ವಿವಿಧ ಕಲಾ ತಂಡಗಳ ಜನಪದ ನೃತ್ಯ ಮೆರುಗು ನೀಡಿತು.
0 Comments