Ticker

6/recent/ticker-posts

ಆನೆಗುಂದಿ ಶ್ರೀಗಳ ಚಾತುರ್ಮಾಸ್ಯದಲ್ಲಿ ಮಾತೃ ಸಮಾವೇಶ

 


ಪಡುಕುತ್ಯಾರು : "ಅಮ್ಮನ ಮಡಿಲಿನಲ್ಲಿ ಸುವಿಚಾರ ಕಲಿತ ಮಕ್ಕಳು ಶ್ರೇಷ್ಠ ಸಾಧಕರಾಗಿ ಮೂಡಿ ಬರಲು ಸಾಧ್ಯವಿದೆ" ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಜಗದ್ಗುರು ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹೇಳಿದರು.

ಶ್ರೀ ಸರಸ್ವತೀ ಮಾತೃ ಮಂಡಳಿ ನೇತೃತ್ವದಲ್ಲಿ ಪಡುಕುತ್ಯಾರು ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ  ನಡೆದ ಮಾತೃ ಸಮಾವೇಶದಲ್ಲಿ ಆಶೀರ್ವಚನ ನೀಡಿದರು

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡುವಲ್ಲಿ ಮಾತೆಯರ ಪಾತ್ರ ಮಹತ್ವದ್ದಾಗಿದೆ. ಮಾತೃ ಪ್ರೀತಿಯ ಜತೆಗೆ ಅಪ್ಪನ ತ್ಯಾಗ, ಪರಿಶ್ರಮದ ಬಗ್ಗೆಯೂ ಅರಿವು ಮೂಡಿಸುವ ಕೆಲಸ ಅಮ್ಮಂದಿರಿಂದ ನಡೆಯಬೇಕು ಎಂದರು.

ಸಂಸ್ಕಾರಯುತ ಮಹಿಳೆ ವಿಚಾರದಲ್ಲಿ ಉಪನ್ಯಾಸ ನೀಡಿದ ಶಿಕಾರಿಪುರ ಆನೆಗುಂದಿ ಮಹಾಸಂಸ್ಥಾನ ಬೆಳಗುತ್ತಿ ಮಠದ ಮಾತೋಶ್ರೀ ಹೇಮಲತಾ ಎನ್. ಸ್ವಾಮೀಜಿ, ವಿಜ್ಞಾನ ತಂತ್ರಜ್ಞಾನದಿಂದ ಸುಖ ಸಂತೋಷ ಕ್ಷಣಿಕ, ಮಾತಪಿತರು ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರ ನೀಡುವ ಶಿಕ್ಷಣಕ್ಕೆ ಒತ್ತು ನೀಡಬೇಕು. ನಕಾರಾತ್ಮಕ ವಿಚಾರದಿಂದ ದೂರವಿಡುವ ಸತ್‌ಸಂಕಲ್ಪ ಮಾಡಬೇಕು ಎಂದು ತಿಳಿಸಿದರು.

ಸಂಸ್ಕಾರಯುತ ವಿದ್ಯಾರ್ಥಿಗಳು ವಿಚಾರದಲ್ಲಿ ಉಪನ್ಯಾಸ ನೀಡಿದ ವಿದ್ವಾನ್ ಮೌನೇಶ್ ಶರ್ಮಾ ಪಡುಕುತ್ಯಾರು, ಸಂಸ್ಕಾರಯತಯವಾದ ಶಿಕ್ಷಣ ಮತ್ತು ಜೀವನ ಪದ್ಧತಿಯಿಂದಾಗಿ ಮನುಷ್ಯ ಸುಸಂಸ್ಕೃತನಾಗಿ ಬೆಳೆಯಲು ಸಾಧ್ಯವಿದೆ ಎಂದರು.

ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾಲಕ್ಷ್ಮಣ ಆಚಾರ್ಯ ಉಡುಪಿ ಅಧ್ಯಕ್ಷತೆ ವಹಿಸಿದ್ದರು. ಮಾತೋಶ್ರೀ ಸರಳಮ್ಮಗುರುನಾಥ ಸ್ವಾಮೀಜಿ ಶಿಕಾರಿಪುರ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಮುನಿಯಾಲು ಸಂಜೀವಿನೀ ಗೋಧಾಮದ ಸವಿತಾ ಆರ್ ಆಚಾರ್ಯ, ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಸುಂದರ ಆಚಾರ್ಯ ಬೆಳುವಾಯಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಕೇಶವ ಶರ್ಮಾ ಇರುವೈಲು,

ಪ್ರಭಾಕರ್ ಆಚಾರ್ಯ ಕೋಟೆಕಾರ್, ದಿನೇಶ್ ಆಚಾರ್ಯ ಪಡುಬಿದ್ರಿ, ಜನಾರ್ಧನ ಆಚಾರ್ಯ ಅರಿಕ್ಕಾಡಿ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ. ಆಚಾರ್, ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ ಉಪಸ್ಥಿತರಿದ್ದರು.

ಸರಸ್ವತಿ ಮಾತೃ ಮಂಡಳಿ ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಪ್ರಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ದೀಪಾ ಸುರೇಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಲತಾ ಶಿವಾನಂದ ಆಚಾರ್ಯ ವಂದಿಸಿದರು

ಕೆ. ಎಂ. ಗಂಗಾಧರ್ ಆಚಾರ್ಯ ಮತ್ತು ಗೀತಾಚಂದ್ರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

ಪಡುಕುತ್ಯಾರು ಶ್ರೀ ಸರಸ್ವತೀ ಮಾತೃಮಂಡಳಿ ಹಾಗೂ ಸಮಾಜ ಭಾಂದವರಿಂದ ಗುರುಪಾದುಕಾ ಪೂಜೆ ನೆರವೇರಿಸಲಾಯಿತು.  ಶಾಲಾ ಕಾಲೇಜು ಹಾಗೂ ಸಾಮಾನ್ಯ ವಿಭಾಗದಲ್ಲಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Post a Comment

0 Comments