Ticker

6/recent/ticker-posts

Ad Code

ಆರು ತಿಂಗಳ ಹಿಂದೆ ಮನೆ ಬಿಟ್ಟು ಪ್ರಿಯಕರನನ್ನು ಮದುವೆಯಾಗಿದ್ದ ಯುವತಿಯ ಮೃತದೇಹ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕಾಸರಗೋಡು:  ಆರು ತಿಂಗಳ ಹಿಂದೆ ಮನೆ ಬಿಟ್ಟು ಪ್ರಿಯಕರನನ್ನು ಮದುವೆಯಾಗಿದ್ದ ಯುವತಿಯ ಮೃತದೇಹ ಗಂಡನ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ಪರಂಬ ಪೋಲೀಸ್ ಠಾಣಾ ವ್ಯಾಪ್ತಿಯ ಅರಮಂಗಾನಂ ಶಾಲೆ ಬಳಿಯ ರಾಜೇಶ್ ರ ಪತ್ನಿ ನಂದನ(20) ಮೃತಪಟ್ಟ ಯುವತಿ. ಇಂದು (ಆದಿತ್ಯವಾರ) ಮದ್ಯಾಹ್ನ ನಂದನ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ದೇಳಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದರು. ಪೆರಿಯ ಆಯಂಪಾರ ವಿಲ್ಲಾರಂಪತಿ ನಿವಾಸಿ ರವಿ ಎಂಬವರ ಪುತ್ತಿಯಾದ ನಂದನ ಲ್ಯಾಬ್ ಟೆಕ್ನಿಶಿಯನ್ ಆಗಿ ದುಡಿಯುತ್ತಿದ್ದಳು. ಆರು ತಿಂಗಳ ಹಿಂದೆ ಈಕೆ ಮನೆಯಿಂದ ನಾಪತ್ತೆಯಾಗಿದ್ದು ರಾಜೇಶ್ ಎಂಬವರ ಜತೆ ಕ್ಷೇತ್ರವೊಂದರಲ್ಲಿ ವಿವಾಹಿತಳಾಗಿದ್ದಳು. ಮದುವೆಯ ನಂತರ ನಂದನ ಪತಿಯ ಮನೆಯಲ್ಲಿದ್ದು ಕೆಲಸಕ್ಕೆ ಹೋಗುತ್ತಿದ್ದಳು. ಇದೀಗ ನಂದನ ಆತ್ಮಹತ್ಯೆ ‌ಮಾಡಲು ಕಾರಣವೇನು ಎಂದು ತಿಳಿದು ಬಂದಿಲ್ಲ

Post a Comment

0 Comments