ಕರ್ಣಾಟಕದ ಆಸ್ಪತ್ರೆಗಳಿಗೆ ರೋಗಿಗಳನ್ನು ಕೊಂಡೊಯ್ದು ಹಿಂತಿರುಗುವ ವೇಳೆ ಎಂಡಿಎಂಎ ತರುತ್ತಿದ್ದ ಆಂಬ್ಯುಲೆನ್ಸ್ ಚಾಲಕನನ್ನು ಎಕ್ಸೈಸ್ ಅಧಿಕಾರಿಗಳು ಬಂಧಿಸಿದ್ದಾರೆ. ಪಯ್ಯನ್ನೂರು ನಿವಾಸಿ ಕೆ.ಪಿ.ಮುಸ್ತಫ(37) ಬಂಧಿತ ಆರೋಪಿ. ಈತನ ಕೈಯಿಂದ 430 ಮಿಲ್ಲಿ ಗ್ರಾಂ ಎಂಡಿ ವಶಪಡಿಸಲಾಗಿದೆ.
ಮಂಗಳೂರು, ಮಣಿಪಾಲ, ಬೆಂಗಳೂರು ಸಹಿತ ವಿವಿದ ಆಸ್ಪತ್ರೆಗಳಿಗೆ ರೋಗಿಗಳನ್ನು ಕೊಂಡುಹೋಗುತ್ತಿದ್ದ ಈತ, ಹಿಂತಿರುಗುವ ವೇಳೆ ಎಂಡಿಎಂಎ ಖರೀದಿಸಿ ತರುತ್ತಿದ್ದನೆನ್ನಲಾಗಿದೆ.ಅನಂತರ ಇತರ ಪೊಟೊ ವಾಟ್ಸಾಪ್ ಮೂಲಕ ಜನರಿಗೆ ಕಳುಹಿಸಿ ವ್ಯಾಪಾರ ಮಾಡುತ್ತಿದ್ದನು. ಈತನ ಮಾದಕವಸ್ತು ವ್ಯಾಪಾರದ ಬಗ್ಗೆ ಮಾಹಿತಿ ಪಡೆದ ಎಕ್ಸೈಸ್ ಅಧಿಕಾರಿಗಳು ಹೊಂಚು ಹಾಕಿ ಆರೋಪಿಯನ್ನು ಬಂಧಿಸಿದ್ದಾರೆ.
0 Comments