Ticker

6/recent/ticker-posts

Ad Code

ಜಿಲ್ಲೆಯ ಅಡಿಕೆ ಕೃಷಿಕರ ಬವಣೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಶಾಸಕರಿಗೆ ಕಿಸಾನ್ ಸೇನೆ ಮನವಿ


 ಬದಿಯಡ್ಕ: ಜಿಲ್ಲೆಯ ಅಡಿಕೆ ಕೃಷಿಕರ ಬವಣೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಕಿಸಾನ್ ಸೇನ್ ಜಿಲ್ಲಾ ಪದಾಧಿಕಾರಿಗಳು  ಶಾಸಕ ಎನ್.ಎ.ನೆಲ್ಲಿಕುನ್ನು ಅವರಿಗೆ ಮನವಿ ಸಲ್ಲಿಸಿದರು. ನಿರಂತರವಾದ ಮಳೆಯಿಂದಾಗಿ ಔಷದ ಸಿಂಪಡಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಇದರಿಂದಾಗಿ ಮಹಾಳಿ ಸಹಿತ ಹಲವು ರೋಗಗಳು ಹರಡುವ ಸಾಧ್ಯತೆಯಿದೆ. ವ್ಯಾಪಕವಾಗಿ ಅಡಿಕೆ ಕೃಷಿ ನಾಶವಾಗಿದೆ. ಕಿಸಾನ್ ಸೇನಾ ನೇತಾರರಾದ ಕಲ್ಲಗ ಚಂದ್ರಶೇಖರ ರಾವ್, ಶುಕೂರ್ ಕಾಣಾಜೆ, ಸಚಿನ್ ಕುಮಾರ್, ವೆಂಕಟ್ರಮಣ ಭಟ್, ಕಮರುದ್ದೀನ್ ಪಾಡ್ಲಡ್ಕ, ಕೇಶವ ಮೂರ್ತಿ, ಪುರಂದರ ರೈ, ಶಂಕರ, ಪಿ.ಕೆ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments