Ticker

6/recent/ticker-posts

Ad Code

ಎಸ್.ಎಫ್.ಐ.ಮುಖಂಡನ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕಾಸರಗೋಡು: ಕೈಚಳಕದಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಹೆಸರು ದಾಖಲಿಸಲ್ಪಟ್ಟ ಎಸ್.ಎಫ್.ಐ.ನೇತಾರನ ಮೃತದೇಹ ಮನೆಯ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಡನ್ನಕಾಡ್ ಕರುವಳ ಪವಿತ್ರನ್ ರವರ ಪುತ್ರ ಶ್ರೀಹರಿ(21) ಮೃತಪಟ್ಟ ಯುವಕ. ನಿನ್ನೆ (ಆದಿತ್ಯವಾರ) ಬೆಳಗ್ಗೆ 11 ರಿಂದ ರಾತ್ರಿ 8 ಗಂಟೆಯ ವರೆಗೆ ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ಈ ಘಟನೆ ನಡೆದಿದೆ.  ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ವಿಧ್ಯಾರ್ಥಿಯಾಗಿದ್ದು ಉಪಾಧ್ಯಕ್ಷನಾಗಿದ್ದಾನೆ. ಕೈ ಬೆರಳಿನ ಮೇಲೆ ಪುಸ್ತಕ ಇಟ್ಟು ಒಂದು ಗಂಟೆಗಳ ತಿರುಗಿಸಿದ ಶ್ರೀಹರಿಯ ಹೆಸರು ಇಂಡಿಯ ಬುಕ್ ಆಫ್ ರೆಕಾರ್ಡಿನಲ್ಲಿ ದಾಖಲಿಯಾಗಿತ್ತು. ಜತೆಗೆ ಗಿನ್ನಿಸ್ ದಾಖಲೆಯ ನಿರೀಕ್ಷೆಯಲ್ಲಿದ್ದನೆನ್ನಲಾಗಿದೆ. ಶ್ರೀಹರಿ ಆತ್ಮಹತ್ಯೆ ಮಾಡಲು ಕಾರಣವೇನು ಎಂದು ತಿಳಿದು ಬಂದಿಲ್ಲ

Post a Comment

0 Comments