ಅಶ್ಲೀಲ ಸಂದೇಶ ಸಹಿತ ಲೈಂಗಿಕ ಹಗರಣದಲ್ಲಿ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ದ ಕಾಂಗ್ರೆಸ್ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ನಗರಸಭಾ ಕೌನ್ಸಿಲರ್ ರಾಜೀನಾಮೆ ನೀಡಿದ್ದಾರೆ ಶೊರ್ಣೂರು ನಗರಸಭೆಯ ಕಾಂಗ್ರೆಸ್ ಸದಸ್ಯೆ ಸಿ.ಸಿಂಧು ರಾಜೀನಾಮೆ ನೀಡಿದ ಮಹಿಳೆ. ನಿನ್ನೆ (ಬುದವಾರ) ಅವರು ನಗರಸಭಾ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಗರಣದಲ್ಲಿ ಸಿಲುಕಿದ ರಾಹುಲ್ ಮಾಂಕುಟ್ಟತ್ತಿಲ್ ವಿರುದ್ದ ಪಕ್ಷವು ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಕ್ರಮ ಕೈಗೊಳ್ಳುವಲ್ಲಿ ಪಕ್ಷವು ಹಿಂದೇಟು ಹಾಕಿದೆ. ಓರ್ವ ಮಹಿಳೆ ಎಂಬ ನೆಲೆಯಲ್ಲಿ ಪಕ್ಷದ ನಿಲುವು ಪ್ರತಿಭಟಿಸಿ ತಾನು ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದಾರೆ. ಜತೆಗೆ ಸಂಸದ ವಿ.ಕೆ.ಶ್ರೀಕಂಠನ್ ಅವರು ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ
0 Comments