ಬದಿಯಡ್ಕ: ಹಿರಿಯ ಕೃಷಿಕ ಬದಿಯಡ್ಕ ಸಮೀಪದ ಮಡಿಪ್ಪು ಕೃಷ್ಣ ಭಟ್ (76) ಬುಧವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅಲ್ಪಕಾಲದಿಂದ ಅಸೌಖ್ಯದಲ್ಲಿದ್ದ ಅವರು ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಕೃಷಿಯೊಂದಿಗೆ ಬದುಕನ್ನು ಕಟ್ಟಿಕೊಂಡ ಅವರು ದ್ವಿಚಕ್ರ ವಾಹನಗಳ ದುರಸ್ತಿಯಲ್ಲಿ ನಿಪುಣರಾಗಿದ್ದರು. ಮಕ್ಕಳಾದ ವೆಂಕಟ್ರಾಜ, ವಿಜಯರಾಜ, ಗಣೇಶ, ಸೊಸೆಯಂದಿರಾದ ವಿನಯಶ್ರೀ, ವಸುಧಾ, ಸಹೋದರ ಮಡಿಪ್ಪು ಗಣಪತಿ ಭಟ್ಟ, ಸಹೋದರಿ ಸವಿತಾ ಉಪ್ಪಿನಂಗಡಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಪತ್ನಿ ರುಕ್ಮಿಣಿ ಈ ಹಿಂದೆ ನಿಧರಾಗಿದ್ದಾರೆ.
0 Comments