ಪೆರ್ಲ: ನೇತಾಜಿ ಫ್ರೆಂಡ್ಸ್ ಸರ್ಕಲ್ ಪೆರ್ಲ ಹಾಗೂ ನೇತಾಜಿ ಪಬ್ಲಿಕ್ ಲೈಬ್ರೆರಿ ಜಂಟಿ ಆಶ್ರಯದಲ್ಲಿ ಪೆರ್ಲ ಶ್ರೀಸತ್ಯನಾರಾಯಣ ಹೈಸ್ಕೂಲ್‌ನಲ್ಲಿ ಸೆ.4ರಂದು ಓಣಂ ಹಬ್ಬ ಆಚರಿಸಲಾಗುವುದು. ಬೆಳಗ್ಗೆ 9ರಿಂದ ಎಲ್‌ಪಿ, ಯುಪಿ, ಹೈಸ್ಕೂಲ್ ವಿಭಾಗದ ಬಾಲಕ ಬಾಲಕಿಯರು, ಮಹಿಳೆಯರು, ಪುರುಷರು, ಸಾರ್ವಜನಿಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ ಸಾರ್ವಜನಿಕ ಓಣಂ ಔತಣಕೂಟ ನಡೆಯಲಿದೆ. ಸಂಜೆ 3.30ರಿಂದ ಸ್ವಾಗತ ಸಮಿತಿ ಅಧ್ಯಕ್ಷ ರಾಮಕೃಷ್ಣ ರೈ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾಠ್ಯಕ್ರಮವನ್ನು ಕಾಸರಗೋಡು ಲೈಬ್ರೆರಿ ಕೌನ್ಸಿಲ್ ಮಾಜಿ ಅಧ್ಯಕ್ಷ ಕೆ.ವಿ. ಕುಂಞರಾಮನ್ ಉದ್ಘಾಟಿಸುವರು. ಲೈಬ್ರೆರಿ ಕೌನ್ಸಿಲ್ ಸದಸ್ಯ ಸಲಾವುದ್ದೀನ್, ಎಣ್ಮಕಜೆ ಗ್ರಾಪಂ ಮಾಜಿ ಉಪಾಧ್ಯಕ್ಷೆ ಆಯಿಷಾಎ.ಎ., ಪೆರ್ಲ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಕ್ಲಬ್ ಅಧ್ಯಕ್ಷ ವಿನೋದ್ ಪೆರ್ಲ, ಕಾವ್ಯದರ್ಶಿ ವಿಶ್ವರಾಜ್ ಮತ್ತಿತರರು ಉಪಸ್ಥಿತರಿರುವರು. ದೈವ ಪರಿಚಾರಕ ರಾಧಾಕೃಷ್ಣ ಅಮೆಕ್ಕಳ ಅವರಿಗೆ ಸನ್ಮಾನ, ಕಣ್ಣೂರು ವಿವಿ ಎಂಎ ಅರ್ಥಶಾಸ್ತ್ರದಲ್ಲಿ ಪ್ರಥಮರ್ರಾಂಕ್ ವಿಜೇತೆ ಸ್ವಾತಿ ಬಿ.ಕೆ., ಪ್ಲಸ್ ಟು ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಶ್ರೀರಂಜಿನಿಗೆ ಪ್ರತಿಭಾ ಪುರಸ್ಕಾರ, 2024-25ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ ಪ್ಲಸ್ ಪಡೆದ ಪೆರ್ಲ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಕೇರಳ ಪೋಕ್ ಲೋರ್ ಪ್ರಶಸ್ತಿ ಗಳಿಸಿದ ಸುಭಾಷ್ ಅರುಕರ ಮತ್ತು ತಂಡದಿಂದ 'ಪಾಟರಜ್' ಕಾಠ್ಯಕ್ರಮ, ಮಧ್ಯಾಹ್ನ ಆಯೋಜಿಸಲಾಗಿದೆ.

0 Comments