Ticker

6/recent/ticker-posts

Ad Code

ಹಾವಿನ ಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಆದೂರು ಆಲಂತ್ತಡ್ಕ ನಿವಾಸಿ ಆಸ್ಪತ್ರೆಯಲ್ಲಿ ಮೃತ್ಯು


 ಮುಳ್ಳೇರಿಯ: ಹಾವಿನ ಕಡಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಆದೂರು ಆಲಂತಡ್ಕ ನಿವಾಸಿ ಚಂದನ್ ಯಾನೆ ಚಂದ್ರ (60) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕರಾದ ಇವರು ಕಳೆದ ತಿಂಗಳ 21 ರಂದು ಸಾಯಂಕಾಲ  ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ಮನೆಯ ಬಳಿಯಿಂದ ಹಾವು ಕಚ್ಚಿತ್ತು. ಅನಂತರ ಮಂಗಳೂರು ದೇರ್ಲಕಟ್ಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಇವರ ಆರೋಗ್ಯ ಸ್ಥಿತಿ ಚಿಂತಾಜನಕವಾದ ಹಿನ್ನೆಲೆಯಲ್ಲಿ ಡಾಕ್ಟರುಗಳ ಆದೇಶದಂತೆ  ಚೆಂಗಳ ಸಹಕಾರಿ ಆಸ್ಪತ್ರೆಗೆ ತರಲಾಗಿತ್ತು. ನಿನ್ನೆ (ಮಂಗಳವಾರ) ಅವರು ಕೊನೆಯುಸಿರೆಳೆದರು. ಇವರು ದಿವಂಗತರಾದ ಅಪ್ಪು ಬೆಳ್ಚಪ್ಪಾಡ-ವೆಳುತ್ತಮ್ಮ ದಂಪತಿಯ ಪುತ್ರರಾಗಿದ್ದಾರೆ. ಮೃತರು  ಪತ್ನಿ ಸರೋಜಿನಿ, ಮಕ್ಕಳಾದ ನಿಶಾ ಕುಮಾರಿ, ನಿತಿನ್ ಕುಮಾರ್ (ಕಾಡಗಂ ಸೇವಾ ಸಹಕಾರಿ ಬ್ಯಾಂಕ್ ನೌಕರ),  ನಿರೋಶ,  ಅಳಿಯಂದಿರಾದ ಬಾಬು ಯಾನೆ ಶಶಿಧರನ್,  ಶ್ರೀಜಿತ್, ಸೊಸೆ ಪ್ರಸೀದ,  ಸಹೋದರ ಸಹೋದರಿಯರಾದ ಅನಿತ, ಕೃಷ್ಣನ್, ಜನಾರ್ಧನ, ವಿಜಯನ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments