Ticker

6/recent/ticker-posts

Ad Code

ಪೆರ್ಲದ ರಾಜಶ್ರೀ ಟಿ. ರೈಗೆ ಕರ್ನಾಟಕ ಲೇಖಕಿಯರ ಸಂಘದ ನಿರುಪಮಾ ಕಥಾ ಪ್ರಶಸ್ತಿ



ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ 2024ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳು ಪ್ರಕಟವಾಗಿದ್ದು ಪೆರ್ಲದ ಸಾಹಿತಿ ರಾಜಶ್ರೀ ಟಿ. ರೈಗೆ ನಿರುಪಮಾ ಕಥಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  ಅವರ 'ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ' ಕಥೆ ಜನಪ್ರಿಯವಾಗಿ ಪ್ರಶಸ್ತಿಗೆ ಪಾತ್ರವಾಗಿದೆ. ತುಳು,ಕನ್ನಡ  ಕಥೆ,ಕಾದಂಬರಿ, ಲೇಖಕಿಯಾಗಿರುವ ಇವರು ಈ ಹಿಂದೆಯೇ ಹಲವು ಪ್ರಶಸ್ತಿಗೆ ಬಾಜನರಾಗಿದ್ದರು. ಪೆರ್ಲದ ಕಾರ್ತಿಕೇಯ ಟಯರ್ ರಿಟ್ರೆಡಿಂಗ್ ಕಂಪೆನಿಯ ಮಾಲಕರಾದ ತಾರನಾಥ ರೈ ಪಡ್ಡಂಬೈಲು ಗುತ್ತು ಇವರ ಧರ್ಮಪತ್ನಿಯಾದ ಇವರು ಸಾಮಾಜಿಕ ಸಾಹಿತ್ಯಿಕವಾಗಿ ಸಕ್ರಿಯರಾಗಿದ್ದಾರೆ. ಪ್ರಸ್ತುತ ವಿಶೇಷ ಚಾನೆಲ್ ಮೂಲಕ ನಡೆಸಿ ಕೊಡುವ "ನಮ್ಮೂರ ಕಟ್ಟ್ ಕಟ್ಟಾಳೆ" ಮೂಲೆ ಗುಂಪಾಗುತ್ತಿರುವ ತುಳುನಾಡ ಸಂಪ್ರದಾಯ ಆಚಾರ ವಿಚಾರಗಳ ವ್ಯಕ್ತಿ ಸಂದರ್ಶನ ಜನಪ್ರಿಯವಾಗಿ ಪ್ರಸಾರವಾಗುತ್ತಿದೆ.

Post a Comment

0 Comments