Ticker

6/recent/ticker-posts

Ad Code

ನೀರಿನ ಸೆಳೆತದಲ್ಲಿ ಸಿಲುಕಿದ ಪತ್ನಿಯ ರಕ್ಷಣೆಗಾಗಿ ಹೊಳೆಗೆ ಹಾರಿದ ಪತಿ ಮೃತ್ಯು


 ನೀರಿನ ಸೆಳೆತದಲ್ಲಿ ಸಿಲುಕಿದ ಪತ್ನಿಯ ರಕ್ಷಣೆಗಾಗಿ ಹೊಳೆಗೆ ಹಾರಿದ ಪತಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಹರಿಪಾಡ್ ನಿವಾಸಿ ಹಾಗೂ ಹರಿಪ್ಪಾಡ್ ಬ್ಲಾಕ್ ಪಂಚಾಯತು ಕ್ಲರ್ಕ್ ಆಗಿದ್ದ ವಿಷ್ಣು ಮೃತಪಟ್ಟ ವ್ಯಕ್ತಿ. ನಿನ್ನೆ (ಮಂಗಳವಾರ) ಮದ್ಯಾಹ್ನ ಆರನ್ಮುಳ ಎಂಬಲ್ಲಿ ಈ ದುರ್ಘಟನೆ ನಡೆದಿದೆ.

    ಓಣಂ ಹಬ್ಬದ ಅಂಗವಾಗಿ ಆರನ್ಮುಳದಲ್ಲಿ ನಡೆಯುವ ವಳ್ಳ ಸದ್ಯ ಕಾರ್ಯಕ್ರಮಕ್ಕೆ ವಿಷ್ಣು ಹಾಗೂ ಕುಟುಂಬ ಸದಸ್ಯರು ಅಸಗಮಿಸಿದ್ದರು. ಮಧ್ಯಾಹ್ನ ಊಟದ ನಂತರ ಹಿಂತಿರುಗುವ ವೇಳೆ ಕುಟುಂಬ ಸದಸ್ಯರಲ್ಲಿ ಕೆಲವರು ಹೊಳೆಗೆ ಸ್ನಾನಕ್ಕಿಳಿದರೆನ್ನಲಾಗಿದೆ. ಈ ವೇಳೆ ವಿಷ್ಣುವಿನ ಪತ್ನಿ ರೇಖಾ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋದರು. ಇದನ್ನು ಕಂಡ ವಿಷ್ಣು ನೀರಿಗೆ ಹಾರಿದ್ದು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ ಅಗ್ನಿಶಾಮಕ ದಳ ಸಿಬಂದಿಗಳು ಆಗಮಿಸಿ ವಿಷ್ಣುವಿನ ಮೃತದೇಹವನ್ನು ಮೇಲಕೆತ್ತಿದ್ದರು. ಇದೇ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ ರೇಖಾ ಳನ್ನು ಊರವರು ರಕ್ಷಿಸಿದರು

Post a Comment

0 Comments