ಟೀಚರ್ಸ್ ಸ್ಪೋರ್ಟ್ಸ್ ಕೌನ್ಸಿಲ್ ಕಾಸರಗೋಡು ಇದರ ವತಿಯಿಂದ ಅಧ್ಯಾಪಕರಿಗಾಗಿರುವ ಕ್ರಿಕೆಟ್ ಪಂದ್ಯಾಟ ಟಿ ಪಿ ಎಲ್ ಸೀಸನ್ 7 ಇತ್ತೀಚೆಗೆ ಕುಂಬಳೆ ಶಾಲಾ ಮೈದಾನದಲ್ಲಿ ಜರಗಿತು. ಸಂಘದ ಅಧ್ಯಕ್ಷರಾದ ಸಂಜೀವ ಸಿಎಚ್ ರವರು ಪಂದ್ಯಾಟವನ್ನು ಉದ್ಘಾಟಿಸಿದರು. ಪಂದ್ಯಾಟದಲ್ಲಿ ರಂಗಸಂಗಮ ಕಾಸರಗೋಡು ಪ್ರಥಮ ಹಾಗೂ ಟೀಚರ್ಸ್ ಆರ್ಮಿ ತಂಡ ದ್ವಿತೀಯ ಸ್ಥಾನವನ್ನು ಗಳಿಸಿತು. ಕುಂಬಳೆ ಜಿ ಎಸ್ ಬಿ ಎಸ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವಿಜಯಕುಮಾರ್ ಸರ್ ಅವರು ಬಹುಮಾನವನ್ನು ವಿತರಿಸಿದರು. ಗೌರವಾಧ್ಯಕ್ಷರುಗಳಾದ ಸದಾಶಿವ ಪೊಯ್ಯೆ ,ಉದಯ ಸಾರಂಗ್, ಕಾರ್ಯದರ್ಶಿ ಪ್ರಶಾಂತ ಕುಮಾರ್ ಬಿ, ಉಪಸ್ಥಿತರಿದ್ದರು. ಕೋಶಾಧಿಕಾರಿ ಅನಿಲ್ ಕುಮಾರ್ ಸ್ವಾಗತಿಸಿದರೆ ಜೊತೆ ಕಾರ್ಯದರ್ಶಿ ರಘುವೀರ್ ರಾವ್ ವಂದಿಸಿದರು.
0 Comments