ಮೀಯಪದವು : ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮಂಜೇಶ್ವರ ಉಪಜಿಲ್ಲಾ ಘಟಕದ ಮಹಾಸಭೆ ಮತ್ತು ಸಮ್ಮೇಳನ ಶ್ರೀ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಜರಗಿತು. ಬೆಳಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮವನ್ನು ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಜಯರಾಮ ಸಿ ಯಚ್ ನಡೆಸಿಕೊಟ್ಟರು. ನಂತರ ವೇದಿಕೆಯಲ್ಲಿ ಪ್ರತಿನಿಧಿ ಸಮ್ಮೇಳನ ಜರಗಿತು. ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಜಯರಾಮ ಸಿ ಯಚ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನಕಾರ್ಯದರ್ಶಿ ಶ್ರೀ ಜೀವನ್ ಕುಮಾರ್ 2024-25 ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿಯಾದ ಶ್ರೀ ಶ್ರೀರಾಮ ಕೆದುಕೋಡಿಯವರು ಲೆಕ್ಕ ಪತ್ರವನ್ನು ಮಂಡಿಸಿದರು. ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ್ ರಾವ್ ಪಿ ಬಿ , ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುಕೇಶ್ , ಕೇಂದ್ರ ಸಮಿತಿಯ ಕೋಶಾಧಿಕಾರಿ ಶ್ರೀ ಶರತ್ ಕುಮಾರ್ , ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಜಬ್ಬಾರ್ ಬಿ , ಕೇಂದ್ರ ಸಮಿತಿಯ ಕಾರ್ಯದರ್ಶಿ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಇವರು ಸಭಿಕರಿಂದ ಬಂದ ಪ್ರಶ್ನೆಗಳಿಗೆ ಧ್ವನಿಯಾದರು. ಬಾಕ್ರಬೈಲ್ ಶಾಲಾ ಶಿಕ್ಷಕಿ ಶ್ರೀಮತಿ ಶಕೀಲಾ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಕೇಂದ್ರ ಸಮಿತಿಯ ಸದಸ್ಯರಾದ ಶ್ರೀ ಅಶೋಕ್ ಕುಮಾರ್ ಕೊಡ್ಲಮೊಗರು ಧನ್ಯವಾದವಿತ್ತರು. ಉಪಜಿಲ್ಲೆಯ ಜೊತೆ ಕಾರ್ಯದರ್ಶಿಯಾದ ಶ್ರೀ ದಿವಾಕರ ಬಲ್ಲಾಳ್ ಕಾರ್ಯಕ್ರಮವನ್ನು ನಿರೂಪಿಸಿದರು. ಈ ಸಂದರ್ಭದಲ್ಲಿ 2025-26ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಡಾಜೆ ಇಲ್ಲಿಯ ಶಿಕ್ಷಕರಾದ ಶ್ರೀ ಅಶೋಕ್ ಕುಮಾರ್ ಕೊಡ್ಲಮೊಗರು, ಉಪಾಧ್ಯಕ್ಷರುಗಳಾಗಿ ಶ್ರೀ ಶಿವರಾಮ ಭಟ್ ಮುಖ್ಯ ಶಿಕ್ಷಕರು ಸರಕಾರಿ ಶಾಲೆ ಕಾಯರ್ ಕಟ್ಟೆ , ಶ್ರೀ ಶಂಕರ ನಾರಾಯಣ ಭಟ್ ಮುಖ್ಯ ಶಿಕ್ಷಕರು ಸರಕಾರಿ ಶಾಲೆ ಉದ್ಯಾವರ , ಶ್ರೀಮತಿ ಮಾಲತಿ ಮುಖ್ಯ ಶಿಕ್ಷಕಿ ಸರಕಾರಿ ಶಾಲೆ ಕುಳೂರು , ಶ್ರೀ ಸುರೇಶ್ ಬಂಗೇರ ಮುಖ್ಯ ಶಿಕ್ಷಕರು ಸರಕಾರಿ ಶಾಲೆ ಮಜಿಬೈಲ್ , ಶ್ರೀಮತಿ ಹರಿಣಾಕ್ಷಿ ಮುಖ್ಯ ಶಿಕ್ಷಕಿ ಸರಕಾರಿ ಶಾಲೆ ಬಡಾಜೆ , ಶ್ರೀಮತಿ ದಯಾವತಿ ಪ್ರಭಾರ ಮುಖ್ಯ ಶಿಕ್ಷಕಿ ಸರಕಾರಿ ಶಾಲೆ ಮೂಡಂಬೈಲ್ , ಪ್ರಧಾನ ಕಾರ್ಯದರ್ಶಿಯಾಗಿ ಮೀಯಪದವು ಪ್ರೌಢ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಶ್ರೀ ಸುನಿಲ್ ಕುಮಾರ್ ಯಂ , ಜತೆ ಕಾರ್ಯದರ್ಶಿಗಳಾಗಿ ಶ್ರೀ ದಿವಾಕರ ಬಲ್ಲಾಳ್ ಶಿಕ್ಷಕರು ಸರಕಾರಿ ಶಾಲೆ ಕುಂಜತ್ತೂರು , ಶ್ರೀ ಜಯಪ್ರಸಾದ್ ಶಿಕ್ಷಕರು ಬಿ ಪಿಪಿ ಎಲ್ ಪಿ ಯಸ್ ಪೆರ್ಮುದೆ , ಶ್ರೀ ದೇವಾನಂದ ಶಿಕ್ಷಕರು ಸರಕಾರಿ ಶಾಲೆ ಮಜಿಬೈಲ್ , ಕೋಶಾಧಿಕಾರಿಯಾಗಿ ಜಿ ಬಿ ಎಲ್ ಪಿ ಯಸ್ ಶಾಲೆಯ ಶಿಕ್ಷಕರಾದ ಶ್ರೀ ಕಿಶೋರ್ ಕುಮಾರ್ ಇವರನ್ನು ಆಯ್ಕೆ ಮಾಡಲಾಯಿತು.ಲೆಕ್ಕ ಪರಿಶೋಧಕರಾಗಿ ಬಾಕ್ರಬೈಲ್ ಎ ಯು ಪಿ ಯಸ ಪಾತೂರು ಶಾಲೆಯ ಶಿಕ್ಷಕರಾದ ಶ್ರೀ ಗಣೇಶ್ ಇವರನ್ನು ಆಯ್ಕೆ ಮಾಡಲಾಯಿತು. ಶ್ರೀಮತಿ ಶೋಭಿತಾ ರಾಜೇಶ್ ಮುಖ್ಯ ಶಿಕ್ಷಕಿ ಕನಿಯಾಲ ಶಾಲೆ ,ಶ್ರೀ ವಿಶ್ವನಾಥ , ಶ್ರೀ ರಾಜೇಶ್ , ಶ್ರೀ ಹರೀಶ್ ಕುಮಾರ್ ಸರಕಾರಿ ಶಾಲೆ ಪೈವಳಿಕೆ, ಶ್ರೀ ಕೃಷ್ಣ ಮೂರ್ತಿ , ಶ್ರೀ ವಿದ್ಯಾ ಪ್ರಸನ್ನ ಹೆದ್ದಾರಿ ಶಾಲೆ , ಶ್ರೀ ಅಜಿತ್ ಕೊಡ್ಲಮೊಗರು ಶಾಲೆ , ಶ್ರೀಮತಿ ನೀತಾ ಸರಕಾರಿ ಶಾಲೆ ಉದ್ಯಾವರ , ಶ್ರೀ ಮೆಲ್ವಿನ್ ಸರಕಾರಿ ಶಾಲೆ ಬೇಕೂರು , ಶ್ರೀ ಗುರುರಾಜ್ ಸರಕಾರಿ ಶಾಲೆ ಉದ್ಯಾವರ ಗುಡ್ಡೆ , ಶ್ರೀ ಸದಾಶಿವ ಬಾಲಮಿತ್ರ ಮುಖ್ಯ ಶಿಕ್ಷಕರು ಪೆರ್ಮುದೆ ಶಾಲೆ , ಶ್ರೀಮತಿ ಮಾಲತಿ ಸರಕಾರಿ ಶಾಲೆ ಉಪ್ಪಳ , ಶ್ರೀ ನಯನ ಪ್ರಸಾದ್ ಸರಕಾರಿ ಶಾಲೆ ಕಡಂಬಾರ್ ,ಶ್ರೀ ಕೃಷ್ಣ ಕೋಳ್ಯೂರು ಶಾಲೆ ಈ ಸದಸ್ಯರನ್ನೊಳಗೊಂಡ ಕಾರ್ಯಾಕಾರೀ ಸಮಿತಿಯನ್ನು ರಚಿಸಲಾಯಿತು. ಕೇಂದ್ರ ಸಮಿತಿಯ ಸದಸ್ಯರಾಗಿ ಶ್ರೀ ಸುಕೇಶ್ , ಶ್ರೀ ಜಯರಾಮ ಸಿ ಯಚ್ , ಶ್ರೀ ಜಯಪ್ರಶಾಂತ್ ಪಿ , ಶ್ರೀ ಶ್ರೀರಾಮ ಕೆದುಕೋಡಿ , ಶ್ರೀ ಜೀವನ್ ಕುಮಾರ್ ಪಿ , ಇವರನ್ನು ಆಯ್ಕೆ ಮಾಡಲಾಯಿತು. ವಿಶೇಷ ಆಹ್ವಾನಿತರಾಗಿ ಉಪಜಿಲ್ಲಾ ವಿದ್ಯಾಧಿಕಾರಿಯಾದ ಶ್ರೀ ಜಾರ್ಜ್ ಕ್ರಾಸ್ತಾ , ಶ್ರೀ ಚಂದ್ರಕಾಂತ , ಶ್ರೀ ಉಮೇಶ ಕೆ , ಶ್ರೀ ಜಬ್ಬಾರ್ ಬಿ , ಶ್ರೀಮತಿ ಕವಿತಾ ಕೂಡ್ಲು ಇವರನ್ನು ಆಯ್ಕೆ ಮಾಡಲಾಯಿತು. ಕಾಲೇಜು ಪ್ರತಿನಿಧಿಯಾಗಿ ಶ್ರೀ ಶಿವಶಂಕರ ಪ್ರಾಧ್ಯಾಪಕರು ಗೋವಿಂದ ಪೈ ಕಾಲೇಜು ಮಂಜೇಶ್ವರ ಇವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರತಿಯೊಂದು ಪಂಚಾಯತಿನ ಜವಾಬ್ದಾರಿಗಳನ್ನು ಅಧ್ಯಾಪಕರಿಗೆ ಹಂಚಲಾಯಿತು. ಶ್ರೀ ಅಶ್ರಫ್ ಮರ್ತ್ಯ ಪೈವಳಿಕೆ , ಶ್ರೀ ದಿವಾಕರ ಬಲ್ಲಾಳ್ ಮಂಜೇಶ್ವರ , ಶ್ರೀ ಜೀವನ್ ಕುಮಾರ್ ವರ್ಕಾಡಿ , ಶ್ರೀ ರೂಪೇಶ್ ಯನ್ ಮೀಂಜ , ಶ್ರೀಮತಿ ಜಯಶ್ರೀ ಮಂಗಲ್ಪಾಡಿ ಹಾಗೂ ಶ್ರೀ ವಸಂತ ಬಿ ಇವರಿಗೆ ನೋನ್ ಪಿ ಇ ಸಿ ಶಾಲೆಗಳ ಜವಾಬ್ದಾರಿಗಳನ್ನು ನೀಡಲಾಯಿತು. ತದ ನಂತರ ನಡೆದ ಸಮ್ಮೇಳನದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಜಯರಾಮ್ ಸಿ ಯಚ್ ವಹಿಸಿ ಸಂಘದ ಕಳೆದ ಒಂದು ವರ್ಷದ ಸಾಧನೆಗಳನ್ನು ಬಣ್ಣಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸುಕೇಶ್ ಅವರು ಪ್ರಾಸ್ತಾವಿಕ ಭಾಷಣ ಮೂಲಕ ಸಂಘ ಹಾದು ಬಂದ ದಾರಿ ಮತ್ತು ಹೋರಾಟದ ಬಗ್ಗೆ ಸಭಿಕರಿಗೆ ವಿಷಯಗಳ್ನು ಪ್ರಸ್ತಾಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಘಟಕ ಇದರ ಅಧ್ಯಕ್ಷರೂ ವಿದ್ಯಾವರ್ಧಕ ಪ್ರೌಢ ಶಾಲೆಯ ಪ್ರಬಂಧಕರಾದ ಡಾ| ಶ್ರೀ ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಇವರು ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ 'ಗಡಿನಾಡಿನಲ್ಲಿ ಕನ್ನಡ ಭಾಷೆಗೆ ಯಾವುದೇ ಧಕ್ಕೆ ಬಂದರೂ ಪರಿಷತ್ತು ಅದರ ವಿರುದ್ಧ ದನಿಯೆತ್ತುವುದರೊಂದಿಗೆ ಒಬ್ಬ ಕನ್ನಡಿಗನಾಗಿ ತಾನು ಕನ್ನಡದ ಹೋರಾಟಕ್ಕೆ ಸದಾ ಸಿದ್ಧ' ಎಂದು ನುಡಿದು ನಮ್ಮನ್ನು ಹುರಿದುಂಬಿಸಿದರು. ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬದ್ರಿಯಾ ಕಾಲೇಜು ಮಂಗಳೂರು ಇದರ ವಿಶ್ರಾಂತ ಪ್ರಾಂಶುಪಾಲರಾದ ಡಾ ಶ್ರೀ ಯನ್ ಇಸ್ಮಾಯಿಲ್ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ 'ಕನ್ನಡಿಗರಾದ ನಾವು ತುಂಬಾ ಉದಾರಿಗಳಾಗಿದ್ದೇವೆ. ಭಾಷೆ ಎಂಬುದು ಬಲವಂತವಾಗಿ ಹೇರುವ ಒಂದು ವಿಚಾರವಲ್ಲ. ಪ್ರಜಾಸತ್ತಾತ್ಮಕ ರಾಜ್ಯದಲ್ಲಿ ಅದು ಅಸಾಧ್ಯ ಎಂದು ಹೇಳಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯವರಾದ ಶ್ರೀ ಜೋರ್ಜ್ ಕ್ರಾಸ್ತ ಅತಿಥಿಯಾಗಿ ಭಾಗವಹಿಸಿ ಕನ್ನಡ ಅಧ್ಯಾಪಕರು ಕನ್ನಡದ ಸಂಪನ್ಮೂಲ ವ್ಯಕ್ತಿಗಳಾಗಿ ಬದಲಾಗಬೇಕು. ಕನ್ನಡವನ್ನು ಉಳಿಸುವ ಪ್ರಯತ್ನವನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಕರೆಕೊಟ್ಟರು. ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ರಾವ್ ಪಿ ಬಿ ಟ್ರಸ್ಟಿನ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾವರ್ಧಕ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೃದುಲ ಕೆ ಯಂ, ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಅರವಿಂದಾಕ್ಷ ಭಂಡಾರಿ, ಕುಂಜತ್ತೂರು ಶಾಲೆಯ ನಿವೃತ್ತ ಶಿಕ್ಷಕರಾದ ಶ್ರೀ ಈಶ್ವರ ಯಂ, ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ಶಿವಶಂಕರ್ , ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಶ್ರೀ ಜಬ್ಬಾರ್ ಬಿ ಕಾರ್ಯಕ್ರಮದ ಬಗ್ಗೆ ಒಂದೆರಡು ಮಾತುಗಳನ್ನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ ಭಡ್ತಿ ಹೊಂದಿದ ಶ್ರೀ ಜಾರ್ಜ್ ಕ್ರಾಸ್ತಾ ಇವರಿಗೆ ಸಂಘದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಎಲ್ ಎಸ್ ಎಸ್ ಹಾಗೂ ಯು ಎಸ್ ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸ್ಕಾಲರ್ಶಿಪ್ ಗೆ ಅರ್ಹತೆ ಪಡೆದ ಮಕ್ಕಳನ್ನು ಕೇಂದ್ರ ಸಮಿತಿಯಿಂದ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು. ಈ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ಕಾರ್ಯದರ್ಶಿಯಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶ್ರೀ ಜೀವನ್ ಕುಮಾರ್ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಜತೆ ಕಾರ್ಯದರ್ಶಿಯಾದ ಶ್ರೀಮತಿ ಜಯಶ್ರೀ ವಂದಿಸಿದರು. ನೂತನ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸುನಿಲ್ ಕುಮಾರ್ ಯಂ ನಿರೂಪಿಸಿದರು.
0 Comments