Ticker

6/recent/ticker-posts

ಮಂಗಳೂರಿನಿಂದ ಕಾಸರಗೋಡಿಗೆ ಸಾರುವ ಬಸ್ಸಿನಿಂದ ಅನಧಿಕೃತ ಮದ್ಯ ವಶ; ತಪಾಸಣೆ ವೇಳೆ ನಾಪತ್ತೆಯಾದ ಮದ್ಯ ಸಾಗಾಟಗಾರ


 ಮಂಜೇಶ್ವರ:  ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಬರುತ್ತಿದ್ದ ಕರ್ಣಾಟಕ ಸಾರಿಗೆ ಬಸ್ಸಿನಲ್ಲಿ ಸಾಗಿಸುತ್ತಿದ್ದ  5.49 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ಎಕ್ಸೈಸ್ ಅಧಿಕಾರಿಗಳು‌ ವಶಪಡಿಸಿಕೊಂಡಿದ್ದಾರೆ. ಮದ್ಯ ಸಾಗಿಸಿದವರು ಯಾರು ಎಂದು ಪತ್ತೆಯಾಗಿಲ್ಲ. ಎಕ್ಸೈಸ್ ಇನ್ಸ್ಪೆಕ್ಟರ್ ಜಿನು ಜೇಮ್ಸ್ ಹಾಗೂ ತಂಡ ಕಾರ್ಯಾಚರಣೆ ನಡೆಸಿದೆ. ಪ್ರಿವೆಂಟಿವ್ ಆಫೀಸರುಗಳಾದ ಮೊಯ್ದೀನ್ ಸಾದಿಕ್, ವಿಜಯನ್ ಸಿ, ಕೆಮು ಪ್ರಿವೆಂಟಿವ್ ಆಫೀಸರ್ ಮಂಜುನಾಥ ಆಳ್ವ, ಸುಬಿನ್ ಫಿಲಿಫ್, ಅಬ್ದುಲ್ ಅಸೀಸ್‌ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments