ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಮಾವಿನಕಟ್ಟೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ಡಿವೈಡರಿಗೆ ಎಂದು ಡಿಕ್ಕಿ ಹೊಡೆದು ಯುವಕ ಮೃತಪಟ್ಟ ದಾರುಣ ಘಟನೆ ನಡೆದಿದೆಮ ಪಚ್ಚಂಬಳ ದೀನಾರ್ ನಗರದ ಮುಹಮ್ಮದ್- ಖೈರುನ್ನೀಸಾ ದಂಪತಿಯ ಪುತ್ರ ಈಚು ಯಾನೆ ಯೂಸೆಫ್(20) ಮೃತಪಟ್ಟ ಯುವಕ. ನಿನ್ನೆ (ಶುಕ್ರವಾರ) ರಾತ್ರಿ ಈ ಘಟನೆ ನಡೆದಿದೆ. ಗೆಳೆಯನನ್ನು ಮೊಗ್ರಾಲಿನಲ್ಲಿ ಬಿಟ್ಟು ಪಚ್ಚಂಬಳ ಮನೆಗೆ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ.
ಗಾಯಗೊಂಡ ಯೂಸುಫ್ ನನ್ನು ಸ್ಥಳೀಯರು ಸೇರಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಕುಂಬಳೆ ಪೊಲೀಸರು ಕೇಸು ದಾಖಲಿಸಿದರು
0 Comments