Ticker

6/recent/ticker-posts

Ad Code

ಕಾಟುಕುಕ್ಕೆ ಸಮೀಪ ಕಂಚಿನಡ್ಕ ನಿವಾಸಿ, ರಾಮಾಯಣ ಸಿದ್ಧ ಬಿ.ವಿ.ನಾರಾಯಣ ಭಟ್ ಕಂಚಿನಡ್ಕ ನಿಧನ

ಪೆರ್ಲಕಾಟುಕುಕ್ಕೆ ಸಮೀಪ ಕಂಚಿನಡ್ಕ ನಿವಾಸಿ  ರಾಮಾಯಣ ಸಿದ್ಧ ಬಿ ವಿ ನಾರಾಯಣ ಭಟ್ ಕಂಚಿನಡ್ಕ (77) ಅವರು   ನಿಧನರಾದರು. ತಮ್ಮ ನಿವಾಸದಲ್ಲೇ 350 ಕ್ಕೂ ಅಧಿಕ  ನಿರಂತರ ರಾಮಾಯಣ ಪಾರಾಯಣ  ಮಾಡಿದ ಪ್ರಯುಕ್ತ, ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳು ಇವರಿಗೆ  ರಾಮಾಯಣ  ಸಿದ್ಧ  ಎಂಬ ಗೌರವದ ಬಿರುದನ್ನು ನೀಡಿರುತ್ತಾರೆ..
30 ಕ್ಕಿಂತಲೂ ಅಧಿಕ ಭಾಗವತ ಪಾರಾಯಣ ಮಾಡಿರುತ್ತಾರೆ.
ಶ್ರೀ ಸತ್ಯ ಸಾಯಿ ವಿಹಾರ ಅಳಿಕೆ ಕಾಲೇಜಿನ ನಿವೃತ್ತ ಉದ್ಯೋಗಿ,, ಎಣ್ಮಕಜೆ ಹವ್ಯಕ ವಲಯದ ಹಲವು ಮನೆಗಳ ಗುರಿಕ್ಕಾರ ,, ಉತ್ತಮ ಸಮಾಜ ಸೇವಕರೂ, ಶೈಕ್ಷಣಿಕ , ಸಾಂಸ್ಕೃತಿಕ ಧಾರ್ಮಿಕ ವಿಭಾಗಗಳ ಮುಂದಾಳು ಸಹಾ ಆಗಿದ್ದರು. ಮೃತರು ಪತ್ನಿ ಶೈಲಾ ಎನ್ ಭಟ್. ಮಕ್ಕಳಾದ ವೈಶಾಲಿ ಕೆ ಎನ್, ನೆಲ್ಲಿಕಳೆಯ, ಅವಿನಾಶ್ ಎನ್ ಭಟ್(ಆಸ್ಟ್ರೇಲಿಯಾ) ಅಭಿಲಾಶ್ ಎನ್ ಭಟ್ (ಆಸ್ಟ್ರೇಲಿಯಾ)
ಅಳಿಯ ಕೇಶವ ಪ್ರಕಾಶ್ ನೆಲ್ಲಿಕಳೆ ಯ (ಶಿಕ್ಷಕ,SNHSS ಪೆರ್ಲ) ಸೊಸೆಯಂದಿರಾದ ಶ್ರುತಿ ಭಟ್ (ಆಸ್ಟ್ರೇಲಿಯಾ)
ರಾಜ ಶ್ರೀ (ಆಸ್ಟ್ರೇಲಿಯಾ). ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಶ್ರೀಯುತರ ನಿಧನಕ್ಕೆ,*ಕಾಸರಗೋಡು ಬ್ರಾಹ್ಮಣ ಪರಿಷತ್* ಹಾಗೂ ಕಾಸರಗೋಡಿನ ಕನ್ನಡಿಗರು
ಸಂತಾಪ ಸೂಚಿಸಿ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸಿರುತ್ತಾರೆ..

Post a Comment

0 Comments