ಕುಂಬಳೆ: ಕುಂಬಳೆ ಪೇಟೆ ಕೇಂದ್ರೀಕರಿಸಿ ಸಮಾಂತರ ಲಾಟರಿ ವ್ಯವಹಾರ ನಡೆಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅನಂತಪುರ ನಿವಾಸಿ ಸತೀಶನ್ (57), ನಾರಾಯಣ ಮಂಗಲ ನಿವಾಸಿ ರಾಜೇಶ್(32) ಬಂಧಿತರು. ಎಸ್.ಐ.ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರು ಆರೋಪಗಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರಿಪಡಿಸಿದ್ದು ರಿಮಾಂಡ್ ವಿಧಿಸಲಾಗಿದೆ. ಪೊಲೀಸ್ ಅಧಿಕಾರಿಗಳಾದ ಬಾಬು, ಚಂದ್ರನ್, ಸುಧೀಶ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಕುಂಬಳೆ ಹಾಗೂ ಪರಿಸರಗಳಲ್ಲಿ ಸಮಾಂತರ ಲಾಟರಿ ದಂಧೆ ವ್ಯಾಪಕವಾಗುತ್ತಿದೆಯೆಂಬ ಮಾಹಿತಿಯ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಸಮಾಂತರ ಲಾಟರಿ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ನಿರ್ದರಿಸಿದ್ದಾರೆ
0 Comments