Ticker

6/recent/ticker-posts

Ad Code

ಬದಿಯಡ್ಕ ಬಳಿ ಬೈಕ್- ಜೀಪು ಡಿಕ್ಕಿ ಹೊಡೆದು ಮಧೂರು ನಿವಾಸಿ ಮೃತ್ಯು


 ಬದಿಯಡ್ಕ: ಇಲ್ಲಿನ ಮುಳ್ಳೇರಿಯ ರಸ್ತೆ ಬೋಳುಕಟ್ಟೆಯಲ್ಲಿ ಜೀಪು ಹಾಗೂ ಬೈಕ್ ಡಿಕ್ಕಿ ಹೊಡೆದು ಓರ್ವ ಮೃತಪಟ್ಟಿದ್ದಾರೆ.ಮಧೂರು ಕೋಡಿಮಜಲು ನಿವಾಸಿ ವಿಜಯ ಕುಮಾರ್ ಯಾನೆ ಪಮ್ಮು (38) ಮೃತಪಟ್ಟವರು. ಬೈಕಿನಲ್ಲಿದ್ದ ನೀರ್ಚಾಲು ಬಳಿಯ ರಾಧಾಕೃಷ್ಣ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.   ನಿನ್ನೆ (ಆದಿತ್ಯವಾರ) ರಾತ್ರಿ ಈ ಘಟನೆ ನಡೆದಿದೆ. ಇನ್ನೋರ್ವ ಗೆಳೆಯನ ಮನೆಗೆ ಹೋಗಿ ಹಿಂತಿರುಗುತ್ತಿದ್ದಾಗ ಅಫಘಾತ ಉಂಟಾಗಿದೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದರು. ದಿವಂಗತ ಕೃಷ್ಣನ್ ಅವರ ಪುತ್ರರಾದ ವಿಜಯ ಕುಮಾರದ ಸಾರಣೆ ಕಾರ್ಮಿಕರಾಗಿದ್ದಾರೆ. ಮೃತರು ತಾಯಿ ಶೀಲ, ಸಹೋದರಿಯರಾದ ಪ್ರಮೋದಿನಿ, ಬಿಂದು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ವಿಜಯಕುಮಾರ್ ಸಕ್ರಿಯ ಬಿಎಂಎಸ್ ಕಾರ್ಯಕರ್ತರಾಗಿದ್ದಾರೆ.

Post a Comment

0 Comments