ಮಗಳ ನಿಧನಾ ನಂತರದ ವಿಧಿ ವಿಧಾನ ಕಾರ್ಯಕ್ರಮಕ್ಕೆ ಚಪ್ಪರ ಸಾಮಾಗ್ರಿ ತಂದ ಟೆಂಪೊ ಮಗುಚಿ ಮನೆಯ ಮುಂದೆ ಬಟ್ಟೆ ತೊಳೆಯುತ್ತಿದ್ದ ತಾಯಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಣ್ಣೂರು ಚೊಕ್ಲಿ ಒಳಿವಿಲಂ ಜಾನು(85) ಮೃತಪಟ್ಟ ದುರ್ದೈವಿ. ನಿನ್ನೆ (ಆದಿತ್ಯವಾರ) ಬೆಳಗ್ಗೆ 11 ಗಂಟೆಯ ವೇಳೆ ಈ ದುರ್ಘಟನೆ ನಡೆದಿದೆ.
ಜಾನು ಅವರ ಪುತ್ರಿ ಪುಷ್ಪ ನಿಧನರಾಗಿದ್ದು, ವಿಧಿ ವಿಧಾನಗಳು (ವೈಕುಂಠ ಸಮಾರಾಧನೆ ಕಾರ್ಯಕ್ರಮ) ಇಂದು (ಸೋಮವಾರ) ನಡೆಯಬೇಕಿತ್ತು. ಇದಕ್ಕಾಗಿ ಬಾಡಿಗೆ ಚಪ್ಪರದ ಸಾಮಗ್ರಿಗಳನ್ನು ತರಲಾಗಿತ್ತು. ಮನೆ ಕೆಳಗೆ ಇದ್ದು, ಮೇಲ್ಭಾಗದಲ್ಲಿ ಟೆಂಪೊ ನಿಲ್ಲಿಸಿ ಚಾಲಕ ಕೆಳಗಿಳಿದಾಗ ಅದು ಮುಂದಕ್ಕೆ ಚಲಿಸಿ ಜಾನು ಅವರ ಮೇಲೆ ಹರಿಯಿತೆನ್ನಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ
0 Comments