Ticker

6/recent/ticker-posts

Ad Code

ಕಾಞಂಗಾಡ್ ಅಂಬಲತ್ತರದಲ್ಲಿ ಆಸಿಡ್ ಸೇವಿಸಿ ಒಂದೇ ಕುಟುಂಬದ ಮೂರು ಮಂದಿ ಮೃತ್ಯು, ಓರ್ವನ ಸ್ಥಿತಿ ಚಿಂತಾಜನಕ


 ಕಾಞಂಗಾಡ್:  ಇಲ್ಲಿನ ಅಂಬಲತ್ತರದಲ್ಲಿ ಆಸಿಡ್ ಸೇವಿಸಿ ಒಂದೇ ಕುಟುಂಬದ ಮೂರು ಮಂದಿ ಆತ್ಮಹತ್ಯೆಗೈದಿದ್ದಾರೆ. ಅಂಬಲತ್ತರ ಪರಕಳಾಯಿ ನಿವಾಸಿ ಗೋಪಿ(60), ಪತ್ನಿ ಇಂದಿರ(57),  ಪುತ್ರ ರಾಜೇಶ್(22) ಮೃತಪಟ್ಟವರು. ಇನ್ನೋರ್ವ ಪುತ್ರ ರಾಕೇಶ್ ಗಂಭೀರ ಸ್ಥಿತಿಯಲ್ಲಿ ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಲಾಗಿದೆ. ಆರ್ಥಿಕ ಸಮಸ್ಯೆಯೇ ಸಾಮೂಹಿಕ ಆತ್ಮಹತ್ಯೆಗೆ ಕಾರಣವೆಂದು ಹೇಳಲಾಗುತ್ತಿದೆ.  ಇಂದು (ಗುರುವಾರ) ಬೆಳಗ್ಗೆ ಈ ಘಟನೆ ನಡೆದಿದೆ. ನಾಲ್ಕು ಮಂದಿ ಒಟ್ಟಾಗಿ ಆಸಿಡ್ ಸೇವಿಸಿದ್ದರು. ಮಾಹಿತಿ ತಿಳಿದು ಆಗಮಿಸಿದ ಸ್ಥಳೀಯರು ನಾಲ್ಕು ಮಂದಿಯನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ದಾರಿ ಮಧ್ಯೆ ಗೋಪಿ, ಇಂದಿರ, ರಾಜೇಶ್ ಎಂಬಿವರು ಮೃತಪಟ್ಟಿದ್ದಾರೆ. ರಾಕೇಶ್ ಇದೀಗ ತೀವ್ರ ನಿಗಾ ವಿಭಾಗದಲ್ಲಿದ್ದಾರೆ

Post a Comment

0 Comments