ತಲಪ್ಪಾಡಿ: ನಿಯಂತ್ರಣ ತಪ್ಪಿದ ಕರ್ಣಾಟಕ ಕೆ.ಎಸ್.ಆರ್.ಟಿ.ಸಿ.ಬಸ್ಸು ಪ್ರಯಾಣಿಕರ ತಂಗುದಾಣಕ್ಕೆ ನುಗ್ಗಿ ಉಂಟಾದ ಅಪಘಾತದಲ್ಲಿ 5 ಮಂದಿ ಮೃತಪಟ್ಟಿದ್ದಾರೆ.
ಮೃತಪಟ್ಟವರದಲ್ಲಿ ಚಾಲಕ, ಮೂರು ಮಂದಿ ಮಹಿಳೆಯರು, ಮಗು ಸೇರಿದ್ದಾರೆ. ಹಲವರಿಗೆ ಗಾಯಗಳಾಗಿದ್ದು 7 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.
ಇಂದು (ಗುರುವಾರ) ಮದ್ಯಾಹ್ನ 1.30 ರ ವೇಳೆ ತಲಪ್ಪಾಡಿಯಲ್ಲಿ ಈ ಘಟನೆ ನಡೆದಿದೆ. ಕಾಸರಗೋಡಿನಿಂದ ಮಂಗಳೂರಿಗೆ ಸಾಗುತ್ತಿದ್ದ ಬಸ್ಸು ಅಫಘಾತಕ್ಕೀಡಾಗಿದೆ. ನಿಯಂತ್ರಣ ತಪ್ಪಿದ ಬಸ್ಸು ಪ್ರಯಾಣಿಕರ ನಡುವೆ ನುಗ್ಗಿದೆ. ಸ್ಥಳೀಯರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ದರು.
0 Comments