ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಕಾರ್ಯಕ್ರಮಗಳು ಜರಗುತ್ತಿದ್ದು, ಶುಕ್ರವಾರ ಬದಿಯಡ್ಕದಿಂದ ಹಸಿರುವಾಣಿ ಸಮರ್ಪಣೆ ನಡೆಯಿತು. ಬದಿಯಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ನರೇಂದ್ರ ಬಿ.ಎನ್., ಗೋಸಾಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ, ನಾಟಿವೈದ್ಯ ಗೋವಿಂದ ಭಟ್ ಬೇಂದ್ರೋಡು, ಪ್ರತಿಭಾ ಬದಿಯಡ್ಕ, ನಾರಾಯಣ ಮಣಿಯಾಣಿ ಚೇರ್ಕೂಡ್ಲು, ಹರೀಶ್ ಭಟ್ ಚೇರ್ಕೂಡ್ಲು, ರಂಜನ್ ಕಡಮಣ್ಣಾಯ ಪೆರಡಾಲ, ಮಹೇಶ್ ವಳಕ್ಕುಂಜ ಜೊತೆಗಿದ್ದರು. ಸಮಿತಿಯ ವತಿಯಿಂದ ಪಾದಪೂಜೆ, ಪಾದುಕಾ ಪೂಜೆ, ಕಾರ್ತಿಕ ಪೂಜೆ ನಡೆಯಿತು. ಶ್ರೀಗಳು ಆಶೀರ್ವಾದ ಮಂತ್ರಾಕ್ಷತೆಯನ್ನು ಹರಸಿದರು. ಬದಿಯಡ್ಕದ ವ್ಯಾಪಾರಿಗಳು, ದಾನಿಗಳು ಸಹಕರಿಸಿದ್ದರು. ಜನಾನುರಾಗಿ ವೈದ್ಯ ಡಾ| ಶ್ರೀನಿಧಿ ಸರಳಾಯ ಬದಿಯಡ್ಕ ಇವರ ನೇತೃತ್ವದಲ್ಲಿ ಬದಿಯಡ್ಕ ಗಣೇಶಮಂದಿರದಲ್ಲಿ ಹಸಿರುವಾಣಿ ಸಂಗ್ರಹಿಸಲಾಯಿತು.
0 Comments