Ticker

6/recent/ticker-posts

Ad Code

ಅಸೌಖ್ಯದಿಂದ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಯುವತಿ ಮೃತ್ಯು


 ಪೆರ್ಲ: ಅಸೌಖ್ಯದಿಂದಾಗಿ ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಯುವತಿ ಮೃತಪಟ್ಟ ಘಟನೆ ನಡೆದಿದೆ. ಅಡ್ಕಸ್ಥಳ ಬಳಿಯ ರಾಮಜ್ಜಗುರಿಯ ರಾಧಾಕೃಷ್ಣ ರೈ-ನಳಿನಿ ದಂಪತಿಯ ಏಕ ಪುತ್ರಿ ಮಯೂರಿ(26) ಮೃತಪಟ್ಟ ಮಹಿಳೆ. ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಮಯೂರಿ ಒಂದು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಶನಿವಾರದಂದು ಇವರಿಗೆ ಜ್ವರ ಉಲ್ಬಣಗೊಂಡಿದ್ದು ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು.

Post a Comment

0 Comments