ಕಣ್ಣೂರು: ಇಲ್ಲಿನ ಕಣ್ಣಪುರಂ ಕೀಯರ ಬಾಡಿಗೆ ಮನೆಯಲ್ಲಿ ನಡೆದ ಭಾರೀ ಸ್ಪೋಟದಲ್ಲಿ ಓರ್ವ ಮೃತಪಟ್ಟಿದ್ದಾರೆ. ಬಾಂಬು ಅಥವಾ ಸ್ಪೋಟಕ ವಸ್ತು ನಿರ್ಮಾಣದ ವೇಳೆ ಸ್ಪೋಟಗೊಂಡಿರಬೇಕು ಎಂದು ಶಂಕಿಸಲಾಗಿದೆ. ಇಂದು (ಶನಿವಾರ) ಮುಂಜಾನೆ 2 ಗಂಟೆಯ ವೇಳೆ ಈ ದುರ್ಘಟನೆ ನಡೆದಿದೆ. ಭಾರೀ ಸ್ಪೋಟದ ಶಬ್ದ ಕೇಳಿ ಎಚ್ಚರಗೊಂಡು ಓಡಿ ಬಂದ ನೆರೆಕರೆಯವರು ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು, ಫೋರೆನ್ಸಿಕ್ ವಿಭಾಗದ ಸಿಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಗೋವಿಂದನ್ ಎಂಬವರ ಮಾಲಕತ್ವದ ಮನೆ ಇದಾಗಿದ್ದು ಅನೂಪ್ ಎಂಬವರಿಗೆ ಬಾಡಿಗೆಗೆ ನೀಡಲಾಗಿತ್ತು. ಇದೀಗ ಮೃತಪಟ್ಟವರ ಮಾಹಿತಿ ಲಭ್ಯವಾಗಿಲ್ಲ. ಬಹುಶಃ ಇವರು ಅನ್ಯ ರಾಜ್ಯ ಕಾರ್ಮಿಕರಿರಬೇಕು ಎಂದು ಶಂಕಿಸಲಾಗಿದೆ.
ಸ್ಪೋಟದಿಂದಾಗಿ ಮನೆ ಪೂರ್ಣವಾಗಿಯೂ ದ್ವಂಸಗೊಂಡಿದೆ. ಸಮೀಪದ ಮನೆಗಳಿಗೂ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
0 Comments