Ticker

6/recent/ticker-posts

Ad Code

ಅರಿಕ್ಕಾಡಿಯ ಭೀಕರ ರಸ್ತೆ ಅಪಘಾತದಲ್ಲಿ ಪ್ರತಾಪನಗರದ ನವೀನ್ ಆಚಾರ್ಯ ದಾರುಣ ಅಂತ್ಯ


ಕುಂಬಳೆ : ಕಾಸರಗೋಡು -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅರಿಕ್ಕಾಡಿಯಲ್ಲಿ  ಸಂಭವಿಸಿದ ರಸ್ತೆ ಅಪಘಾತದಲ್ಲಿ ಉಪ್ಪಳ ಬಳಿಯ ಪ್ರತಾಪನಗರ  ತಿಂಬರ ನಿವಾಸಿಯಾದ ನಾರಾಯಣ ಆಚಾರ್ಯರ ಪುತ್ರ ನವೀನ ಆಚಾರ್ಯ (52) ಮೃತಪಟ್ಟಿದ್ದಾರೆ. ಬಡಗಿ ವೃತ್ತಿ ನಿರ್ವಹಿಸುತ್ತಿದ್ದ ಇವರು ಶನಿವಾರ ಸಂಜೆ ಬಂಬ್ರಾಣ ಭಾಗದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ವೇಳೆ ಈ ದುರ್ಘಟನೆ ನಡೆದಿದೆ. ಇವರು ಸಂಚರಿಸುತ್ತಿದ್ದ ಸ್ಕೂಟಿಗೆ  ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ.  ಇವರ ತಾಯಿ ಈ ಹಿಂದೆಯೇ ತೀರಿಕೊಂಡಿದ್ದು ಪತ್ನಿ ಜ್ಯೋತಿ, ಮಕ್ಕಳಾದ ಹರ್ಷ ಕಿರಣ್ ,ಮಾನಸ, ಸಹೋದರರಾದ ಪ್ರಕಾಶ,ಹರೀಶ, ದಿನೇಶ,ಚಂದ್ರ,ಸಹೋದರಿಯರಾದ ಶಾಂತ,ವೀಣಾ,ವಿದ್ಯಾ ಎಂಬಿವರನ್ನಗಲಿದ್ದಾರೆ.   ಬಡ ಕುಟುಂಬಕ್ಕೆ ಸೇರಿದ ಇವರು ಚಿಕ್ಕಂದಿನಿಂದಲೇ ಮರದ ಕೆಲಸ ನಿರ್ವಹಿಸಿ ಜೀವನ ನಡೆಸುತ್ತಾ ಜನಾನುರಾಗಿಯಾಗಿದ್ದ ಇವರ ಅಗಲುವಿಕೆ ಪ್ರತಾಪನಗರ ಪರಿಸರದಲ್ಲಿ ಶೋಕ ಸಾಗರ ಸೃಷ್ಠಿಸಿದೆ. 

Post a Comment

0 Comments