Ticker

6/recent/ticker-posts

Ad Code

ಕೆಎಸ್ ಟಿಯುನಿಂದ ಜಿಲ್ಲಾ ವಿದ್ಯಾಧಿಕಾರಿ ಕಚೇರಿಗೆ ಮಾರ್ಚ್ ಹಾಗೂ ಧರಣಿ

 


ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಕೇರಳ ಸ್ಕೂಲ್ ಟೀಚರ್ಸ್ ಯೂನಿಯನ್ (ಕೆ ಎಸ್ ಟಿ ಯು) ನೇತೃತ್ವದಲ್ಲಿ ಜಿಲ್ಲಾ ವಿದ್ಯಾಧಿಕಾರಿ ಕಚೇರಿಗೆ ಅಧ್ಯಾಪಕರು ಮಾರ್ಚ್ ಹಾಗೂ  ಧರಣಿಯನ್ನು ನಡೆಸಿ ಪ್ರತಿಭಟಿಸಿದರು. ಧರಣಿಯನ್ನು ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಅವರು ಉದ್ಘಾಟಿಸಿ ಮಾತನಾಡಿ ಅಧ್ಯಾಪಕ ನೇಮಕಾತಿ ಪಡೆದು ಹಲವಾರು ವರ್ಷ ಕಳೆದರೂ ಅಂಗೀಕಾರ ನೀಡದೆ,ಸಂಬಳವೂ ನೀಡದೆ ಅಧ್ಯಾಪಕರನ್ನು ಆತ್ಮಹತ್ಯೆಗೆ ತಳ್ಳುವ ಧೋರಣೆಯನ್ನು ಕೇರಳ ಸರ್ಕಾರ ತಳೆದಿದೆ. ಅಧ್ಯಾಪಕರಿಗೆ ನ್ಯಾಯವಾಗಿ ಸಿಗಬೇಕಾದ ಸವಲತ್ತುಗಳನ್ನು ತಡೆಹಿಡಿಯಲಾಗಿದೆ. ಹೊಸ ವೇತನ ಆಯೋಗದ ಬಗ್ಗೆ ಸರಕಾರವು ನಕಾರಾತ್ಮಕವಾದ ನಿಲುವು ಪ್ರತಿಭಟನಾರ್ಹ ಎಂದು ಹೇಳಿದರು.

ಜಿಲ್ಲಾಧ್ಯಕ್ಷ ಯಾಸರ್ ಅರಾಫತ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್.ಟಿ.ಯು ರಾಜ್ಯ ಕಾರ್ಯದರ್ಶಿ ಅಬ್ದುಲ್ ಗಫೂರ್ ದೇಲಿ ಮುಖ್ಯ ಭಾಷಣ ಮಾಡಿದರು. ರಾಜ್ಯ ಮುಖಂಡರಾದ ಶೌಕತಲಿ ಅಕ್ಕಲಾತ್, ಸಮೀರ್ ತೆಕ್ಕಿಲ್, ಶಾಹಿನಾ ಕೆ.ಎಂ,, ಅಬ್ದುಲ್ ಸತ್ತಾರ್ (ಕೆಟಿಎಫ್), ಮಹಮ್ಮದ್. ಪಿ, ಯೂನಸ್. ಎಂ ಟಿ, ಹಮೀದ್ ಪಿ ಮಾತನಾಡಿದರು. ರಫೀಕ್ ಕಲ್ಲರ, ಶಫೀಕ್. ಎನ್, ಕಮಾಲುದ್ದೀನ್ ಎಂಎ, ಮುಹಮ್ಮದ್ ಬಶೀರ್, ಸಿರಾಜ್ ಖಾಜಿಲೈನ್, ಜಾಫರ್ ಕೆಪಿ, ಆಸಿಫ್ ನಾಯಮ್ಮಾರ್ ಮೂಲ, ಸಿದ್ದೀಕ್. ಎನ್.ಎಂ, ಮುರ್ಷಿದಾ, ನಾಸಿಂ ನೆಲ್ಲಿಕುನ್ನು, ಖಲೀಲ್ ಬೆಳಿಂಜ, ರಶೀದ್. ಟಿ.ಎಂ, ಶುಹೈಬ್ ಪಿ.ವಿ, ಆರಿಫ ಉಪ್ಪಳ, ಅಶ್ರಫ್ ಮರ್ತ್ಯ, ಜುಬೇರ್, ಆಸಿಫ್ ಚೇರಾಲ್, ಶಹನಾಝ್, ದಾವೂದ್. ಎ.ಜಿ, ಶೆರಿನ್ ಮಲಬಾರಿ, ಸುಮಯ್ಯ, ಶಮ್ನಾ, ಇರ್ಷಾದ್, ರಸ್ಲಿ ಬಿದಿರ ಮೊದಲಾದವರು ಮಾರ್ಚ್ ಗೆ ನೇತೃತ್ವ ನೀಡಿದರು.

Post a Comment

0 Comments