ಕಳತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಮಂಜೇಶ್ವರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು,
ಕಿದೂರು ಶ್ರೀ ಮಹಾದೇವ ನವಜೀವನ ಸಮಿತಿ ಕಳತ್ತೂರು ಇದರ ಆಶ್ರಯದಲ್ಲಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ದ್ವಿತೀಯ ವರ್ಷದ ನವಜೀವನೋತ್ಸವದ ಅಂಗವಾಗಿ ಕೆಸರ ಕಂಡೊಡ್ಡು 'ಕುಸಲ್ದ ಗೊಬ್ಬುಲು ಮನ ರಂಜಿಸಿತು.ಆಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಉದ್ಘಾಟಿಸಿದರು.
ಜನಜಾಗೃತಿ ವೇದಿಕೆ ಮಂಜೇಶ್ವರ ತಾಲೂಕು ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ ಅಧ್ಯಕ್ಷತೆವಹಿಸಿದ್ದರು.ಜೀವನಾಥ ಜೋಡುಕಟ್ಟೆ ಸಂಘಟಕರಾದ ರಿತೇಶ್ ಆಳ್ವ ಅವರಿಗೆ ಸಂಪ್ರದಾಯಿಕವಾದ ಮುಟ್ಟಾಳೆ ತೊಡಿಸಿ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಗ್,
ಜನಜಾಗೃತಿ ವೇದಿಕೆ ಕುಂಬಳೆ ವಲಯಾಧ್ಯಕ್ಷ ಮಹೇಶ್ ಪುಣಿಯೂರು,ಪಂಚಾಯತ್ ಸದಸ್ಯೆ ಪುಷ್ಪಲತ ಕಾಜೂರು,ಮಾಜಿ ಪಂಚಾಯತ್ ಸದಸ್ಯ ಸುಕೇಶ್ ಭಂಡಾರಿ,ನಿವೃತ್ತ ಗ್ರಾಮಾಧಿಕಾರಿ ಶಿವರಾಮ ಶೆಟ್ಟಿ ಮಾಣಿಬೆಟ್ಟು, ಮಹಾದೇವ ಭಜನಾ ಮಂದಿರದ ಅಧ್ಯಕ್ಷ ಬಾಲಾಕೃಷ್ಣ ನೆಲ್ಕಡ್ಕ,ಜನ ಜಾಗೃತಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ ಆಚಾರ್ಯ, ಕುಂಟಗೇರಡ್ಕ ಕುಪ್ಪೆ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ಚಂದ್ರ ಕಾಜೂರು, ಸಾಮಾಜಿಕ ಮುಂದಾಳು ಕೆ.ಸಿ.ಮೋಹನ, ಕೃಷಿಕ ಆನಂದ ರೈ ಕಾಜೂರು ಉಪಸ್ಥಿತರಿದ್ದರು. ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲ ಸುವರ್ಣ ಸ್ವಾಗತಿಸಿ ಅಶ್ವಿನಿ ಎಂ.ಪೆರುವಾಯಿ ನಿರೂಪಿಸಿದರು. ಬಳಿಕ ಕೆಸರುಗದ್ದೆಯಲ್ಲಿ ವಿವಿಧ ಸ್ಪರ್ಧೆಗಳು ನಡೆಯಿತು.
0 Comments