ಕುರುಡಪದವು: ಹಿರಿಯ ಪ್ರಾಥಮಿಕ ಶಾಲೆ ಕುರುಡಪದವಿನಲ್ಲಿ ಸಂಭ್ರಮ, ಸಾಮರಸ್ಯದಿಂದೊಡಗೂಡಿದ ಓಣಂ ಆಚರಣೆ ನಡೆಯಿತು.ಹಿರಿಯ ಶಿಕ್ಷಕರಾದ ಶ್ರೀ ಗಿರೀಶ್ ಸರ್ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುವುದರೊಂದಿಗೆ ಓಣಂ ಆಚರಣೆಗೆ ನಾಂದಿ ಹಾಡಿದರು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪದ್ಮನಾಭ ಬರ್ಲಾಯ ಸರ್ ಓಣಂ ಮಹತ್ವವನ್ನು ವಿವರಿಸುವುದರೊಂದಿಗೆ ಓಣಂ ಆಚರಣೆಯನ್ನು ಔಪಚಾರಿಕವಾಗಿ ಉದ್ಘಾಟನೆಗೈದರು.ಶಾಲೆಯ ಎಲ್.ಪಿ. ,ಯು.ಪಿ. ವಿದ್ಯಾರ್ಥಿಗಳು ರಕ್ಷಕರು ಸೇರಿ, ತರಗತಿಯಲ್ಲಿ ಹೂವಿನ ರಂಗೋಲಿ ಹಾಕಿ ಸಂಭ್ರಮಿಸಿದರು.ಎಲ್.ಕೆ.ಜಿ.,ಯು.ಕೆ.ಜಿ, ಮತ್ತು 1, 2 ನೇ ತರಗತಿ ವಿದ್ಯಾರ್ಥಿಗಳಿಗೆ ಬಟಾಟೆ ಹೆಕ್ಕುವ ಸ್ಪರ್ಧೆ, 3, 4ನೇ ತರಗತಿ ಮಕ್ಕಳಿಗೆ ಬಟಾಟೆ ಹೆಕ್ಕುವ ಸ್ಪರ್ಧೆ, ಬಾಂಬ್ ಇನ್ ದ ಸಿಟಿ, ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಶೇಷವಾಗಿ ಮಾತೆಯರಿಗೆ ಸಂಗೀತ ಕುರ್ಚಿ ಸ್ಪರ್ಧೆ ನಡೆಸಲಾಯಿತು.ಎಲ್ಲಾ ಮಾತೆಯರು ಆಸಕ್ತಿಯಿಂದ ಈ ಸ್ಪರ್ಧೆಯಲ್ಲಿ ಭಾಗಿಗಳಾದರು.ಶಾಲಾ ಶಿಕ್ಷಕ-ಶಿಕ್ಷಕಿಯರು, ರಕ್ಷಕರು ಸೇರಿ ತಯಾರಿಸಿದ ಓಣಂ ಹಬ್ಬದೂಟವನ್ನು ಎಲ್ಲರಿಗೂ ಉಣ ಬಡಿಸಲಾಯಿತು. ಮಧ್ಯಾಹ್ನ ನಂತರ ಯು.ಪಿ.ವಿಭಾಗದ ಹುಡುಗರು ಮತ್ತು ಹುಡುಗಿಯರಿಗೆ ಬಾಂಬ್ ಇನ್ ಸಿಟಿ, ಸಂಗೀತ ಕುರ್ಚಿ, ಮಡಿಕೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಾಲಾ ಶಿಕ್ಷಕರಾದ ಶ್ರೀ ಅಬ್ದು ರಹೀಂ, ಶ್ರೀ ಪ್ರಶಾಂತ್ ಕುಮಾರ್, ಶ್ರೀ ಯಶಸ್ ಕುಮಾರ್, ಶ್ರೀ ಚಿದಾನಂದ ಕುರುಡಪದವು, ಶಿಕ್ಷಕಿಯರಾದ ಶ್ರೀಮತಿ ಪ್ರಮೀಳಾ, ಶ್ರೀಮತಿ ಅರ್ಚನಾ, ಶ್ರೀಮತಿ ಮೋಹಿನಿ ಟೀಚರ್ ಹಾಗೂ ರಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಈ ಕಾರ್ಯಕ್ರಮದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡಿದರು. ಆ ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಷೀರ್ ಸಾಪ್ಕೋ, ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಹಸೀನಾ ಕುರುಡಪದವು, ಹಿರಿಯ ಶಿಕ್ಷಕರಾದ ಗಿರೀಶ್ ಸರ್ ಉಪಸ್ಥಿತರಿದ್ದು , ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗಿರೀಶ್ ಸರ್ ಓಣಂ ಹಬ್ಬದ ಆಚರಣೆ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.ಸತೀಶ್ ಸರ್ ಕಾರ್ಯಕ್ರಮ ನಿರೂಪಿಸಿದರು.ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
0 Comments