Ticker

6/recent/ticker-posts

Ad Code

ಕರ್ಣಾಟಕ ಸಾರಿಗೆ ಬಸ್ಸಿನಲ್ಲಿ ಎಕ್ಸೈಸ್ ಕಾರ್ಯಾಚರಣೆ; 125 ಗ್ರಾಂ ಗಾಂಜ ಸಹಿತ ಜಾರ್ಖಂಡ್ ನಿವಾಸಿಯ ಸೆರೆ


 ಮಂಜೇಶ್ವರ: ಕರ್ಣಾಟಕ ರಾಜ್ಯ ಸಾರಿಗೆ ಬಸ್ಸಿನಲ್ಲಿ ಎಕ್ಸೈಸ್ ಅಧಿಕಾರಿಗಳು ನಡೆಸಿದ ತಪಾಸಣೆ ವೇಳೆ 125 ಗ್ರಾಮ ಗಾಂಜ ಸಹಿತ ಜಾರ್ಖಂಡ್ ನಿವಾಸಿಯನ್ನು ಬಂಧಿಸಲಾಗಿದೆ.  ಜಾರ್ಖಂಡ್ ನಿವಾಸಿ ಆಶಿಶ್ ತಿವೇದಿ(24) ಬಂಧಿತ ಆರೋಪಿ. ನಿನ್ನೆ (ಆದಿತ್ಯವಾರ) ಸಾಯಂಕಾಲದ 4.30 ರ ವೇಳೆ ಎಕ್ಸೈಸ್ ಇನ್ಸ್ಪೆಕ್ಟರ್ ಜಿನು ಹಾಗೂ ತಂಡ ಮಂಜೇಶ್ವರ ಚೆಕ್ ಪೋಸ್ಟ್ ನಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಗಾಂಜ ಸಹಿತ ಆರೋಪಿಯನ್ನು ಬಂಧಿಸಲಾಗಿದೆ. ಎಕ್ಸೈಸ್ ಅಧಿಕಾರಿಗಳಾದ ಜಿಜಿನ್ ಎಂ.ವಿ, ಸುನಿಲ್,ಸಜೊತ್ ಎಂಬಿವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು

Post a Comment

0 Comments