Ticker

6/recent/ticker-posts

Ad Code

ಕೇರಳ ಸರಕಾರದ ಜನ ವಿರುದ್ಧ ವಂಚನೆಗೆದುರಾಗಿ ಬಿಎಂಎಸ್ ನೇತೃತ್ವದಲ್ಲಿ ರಾಜ್ಯದಾದ್ಯಂತ ಕಾಲ್ನಡಿಗೆ ಜಾಥಾ; ಪೈವಳಿಕೆ ಪಂಚಾಯತು ಮಟ್ಟದ ಕಾರ್ಯಕ್ರಮ ಯಶಸ್ವಿಗೊಳಿಸಲು ನಿರ್ದಾರ


 ಪೈವಳಿಕೆ:  ಕೇರಳ ಸರಕಾರದ ಜನ ವಿರುದ್ಧ ವಂಚನೆಗೆದುರಾಗಿ ಬಿಎಂಎಸ್   ನೇತೃತ್ವದಲ್ಲಿ ರಾಜ್ಯದಾದ್ಯಂತ  ಪಂಚಾಯತ್ ಮಟ್ಟದಲ್ಲಿ ಕಾಲ್ನಡೆ ಪ್ರಚಾರ ಜಾಥಾ ಹಮ್ಮಿಕೊಳ್ಳಲಾಗಿದೆ. ಪೈವಳಿಕೆ ಪಂಚಾಯತ್ ಮಟ್ಟದಲ್ಲಿ ನಡೆಯುವ ಕಾಲ್ನಡಿಗೆ ಪ್ರಚಾರ ಜಾಥಾ ಸೆಪ್ಟೆಂಬರ್ 17 ರಂದು ನಡೆಸಲು ತೀರ್ಮಾನಿಸಲಾಗಿದೆ.  ಇದರ ಯಶಸ್ವಿಗಾಗಿ  ಪೈವಳಿಕೆ ಪಂಚಾಯತ್ ಮಟ್ಟದ ಪೂರ್ವಭಾವಿ ಸಭೆಯು  ಬಾಯಾರು ಪದವು ಮಹಮ್ಮಾಯಿ ಮಂದಿರದಲ್ಲಿ   ನಡೆಯಿತು. ಈ ಸಭೆಯಲ್ಲಿ ಬಿಎಂಎಸ್ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಜತೆ ಕಾರ್ಯದರ್ಶಿ ಹರೀಶ್ ಕುದುರೆಪಾಡಿ, ಪೈವಳಿಕೆ ಪಂಚಾಯತ್ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ , ಬಿಜೆಪಿಯ ಸುಬ್ರಹ್ಮಣ್ಯ ಭಟ್, ಬಲ್ಲಾಳ್ ಮಾಸ್ತರ್ ಬಾಯಾರು ಪದವು ಆಟೋ ಚಾಲಕ ಸಮಿತಿ ಪದಾಧಿಕಾರಿಗಳು, ಹಾಗೂ ಪಂಚಾಯತ್ ಸಮಿತಿಯ  ಕಾರ್ಯಕರ್ತ ಬಂದುಗಳು ಭಾಗವಹಿಸಿದ್ದರು. 17 ರಂದು ನಡೆಯುವ ಕಾಲ್ನಡೆ ಜಾಥಾ ವನ್ನು ಯಶಸ್ವಿಗೊಳಿಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು.

Post a Comment

0 Comments