Ticker

6/recent/ticker-posts

Ad Code

ಗೆಳೆಯರ ಜತೆ ತೋಡಿನಲ್ಲಿ ಸ್ನಾನ ಮಾಡುತ್ತಿದ್ದ 6 ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತ್ಯು


 ಚೆರ್ಕಳ: ಇಲ್ಲಿನ ಪಾಡಿ ಬಳಿ 6 ನೇ ತರಗತಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಮುಟ್ಟತ್ತೋಡಿ ವಿಲ್ಲೇಜು ವ್ಯಾಪ್ತಿಯ ಕಲ್ಲಕಟ್ಟ, ಬೆಳ್ಳೂರಡ್ಕ ನಿವಾಸಿ ಹಸೈನಾರರ ಪುತ್ರ ಮಿಥ್ ಲಾಜ್(11) ಮೃತಪಟ್ಟ ಬಾಲಕ. ಇಂದು (ಶನಿವಾರ) ಸಂಜೆ ಗೆಳೆಯರ ಜತೆ ತೋಡಿನಲ್ಲಿ ಸ್ನಾನ ಮಾಡುತ್ತಿರುವ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದನೆನ್ನಲಾಗಿದೆ. ಮಾಹಿತಿ ತಿಳಿದು ಆಗಮಿಸಿದ ಅಗ್ನಿಶಾಮಕ ದಳ, ಪೊಲೀಸರು, ಸ್ಥಳೀಯರು ಸೇರಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಅನಂತರ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತನು ತಂದೆ, ತಾಯಿ ಮಿಥುಜಿ, ಸಹೋದರ ಸಹೋದರಿಯರಾದ ಸಾಬಿತ್, ಬಾಸಿತ್, ಬಾಸಿಲ, ಸಹಲ ಎಂಬಿವರನ್ನು ಅಗಲಿದ್ದಾನೆ. ಮಿಥ್ ಲಾಜ್ ಆಲಂಪಾಡಿ ಶಾಲೆಯ ವಿಧ್ಯಾರ್ಥಿಯಾಗಿದ್ದನು.

Post a Comment

0 Comments