Ticker

6/recent/ticker-posts

Ad Code

ಒಂಟಿಯಾಗಿ ವಾಸಿಸುವ ಕೂಲಿ ಕಾರ್ಮಿಕನ ಮೃತದೇಹ ಮನೆಯೊಳಗೆ ಪತ್ತೆ


 ಕುಂಬಳೆ: ಒಂಟಿಯಾಗಿ ವಾಸಿಸುವ  ಕೂಲಿ ಕಾರ್ಮಿಕ ವ್ಯಕ್ತಿಯ ಮೃತದೇಹ ಮನೆಯೊಳಗೆ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಬಣೂರು ಮಿನಾರ್ ಪಂಜ ನಿವಾಸಿ ಈಶ್ವರ ಮೂಲ್ಯ (50 ) ಮೃತಪಟ್ಟವರು.  ನಿನ್ನೆ ಗೆಳೆಯರೊಬ್ಬರು ಇವರನ್ನು ಕರೆಯಲು ಹೋದಾಗ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ. ಕೂಡಲೇ ಸಂಬಂಧಿಕರಿಗೆ ಮಾಹಿತಿ ನೀಡಲಾಯಿತು.  ಮಾಹಿತಿ ತಿಳಿದು ಆಗಮಿಸಿದ ಕುಂಬಳೆ ಪೊಲೀಸರು ಮಹಜರು ನಡೆಸಿದ ನಂತರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತರು ಅವಿವಾಹಿತರಾಗಿದ್ದಾರೆ

Post a Comment

0 Comments