Ticker

6/recent/ticker-posts

Ad Code

ಪೆರ್ಲ ಶಾಲೆಯಲ್ಲಿ ಸೌಹರ್ದತೆಯ ಸವಿಯನ್ನು ಉಣಬಡಿಸಿದ ಓಣಂ


 ಪೆರ್ಲ : ಸಮಾನತೆ ಹಾಗೂ ಸೌಹರ್ದತೆಯ ಪ್ರತೀಕವಾಗಿ ಆಚರಿಸುವ ಕೇರಳದ ನಾಡ ಹಬ್ಬವಾದ ಓಣಂ ಆಚರಣೆ ಪೆರ್ಲ ಸ.ನಾ‌.ಎಲ್ ಪಿ.ಶಾಲೆಯಲ್ಲಿ ವೈವಿಧ್ಯಮಯವಾಗಿ ಗಮನ ಸೆಳೆಯಿತು.ಮಕ್ಕಳಿಗೆ ಹೂವಿನ ರಂಗೋಲಿ ರಚನೆ ಸ್ಪರ್ಧೆ ಸಹಿತ ವಿವಿಧ ಆಟೋಟ ಸ್ಪರ್ಧೆ ನಡೆಸಲಾಗಿತ್ತು.  ಎಲ್ಲಾ ಕ್ಲಾಸಿನ ಮಕ್ಕಳು ಸಮಾನತೆಯಿಂದ ಕುಳಿತು ಓಣಂ ಔತಣಕೂಟ ನಡೆಸಲಾಯಿತು. ಶಾಲಾ ಶಿಕ್ಷಕ ರಕ್ಷಕರು ಎಲ್ಲರೂ  ಸಮಾನರಾಗಿ ನೆಲದಲ್ಲಿಯೇ ಕುಳಿತು ಬಾಳೆ ಎಲೆಯಲ್ಲಿಯೇ ಓಣಂನ ಭಕ್ಷ್ಯ ವೈವಿಧ್ಯತೆಗಳನ್ನು ಮೆಲ್ಲು  ವ ದೃಶ್ಯ ಮಕ್ಕಳಿಗೆ ಅವಿಸ್ಮರಣೀಯವಾಯಿತು. ಶಾಲಾ ಶಿಕ್ಷಕ ವೃಂದದೊಡನೆ ರಕ್ಷಕ ಸಂಘ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿತ್ತು.

Post a Comment

0 Comments