Ticker

6/recent/ticker-posts

Ad Code

ಅಗ್ನಿ ಫ್ರೆಂಡ್ಸ್ ಬದಿಯಡ್ಕ ಆಶ್ರಯದಲ್ಲಿ ನೂತನ ಅಂಬುಲೆನ್ಸ್ ಉದ್ಘಾಟನೆ ನಾಳೆ


 ಬದಿಯಡ್ಕ: ಅಗ್ನಿ ಫ್ರೆಂಡ್ಸ್ ಬದಿಯಡ್ಕ ಆಶ್ರಯದಲ್ಲಿ ನೂತನ ಅಂಬುಲೆನ್ಸ್ ಉದ್ಘಾಟನೆ ನಾಳೆ (ಶುಕ್ರವಾರ) ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಬದಿಯಡ್ಕ ಅಗ್ನಿ ಕ್ಲಬ್ ಪರಿಸರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್.ಬದಿಯಡ್ಕ ಖಂಡ ಸಂಘಚಾಲಕ ರಮೇಶ್ ಕಳೇರಿ ಅವರು ಉದ್ಘಾಟನೆ ನೆರವೇರಿಸುವರು. ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಅಶ್ವಿನಿ.ಎಂ.ಎಲ್.ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಿಜೆಪಿ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಪಂಚಾಯತು ಸಮಿತಿ ಅಧ್ಯಕ್ಷ ವಿಶ್ವನಾಥ ಪ್ರಭು, ಅಗ್ನಿ ಕ್ಲಬ್ ಅಧ್ಯಕ್ಷ ಅನುಲ್ ಕುಟ್ಟನ್ ಮೊದಲಾದವರು ಉಪಸ್ಥಿತರಿರುವರು.

Post a Comment

0 Comments