Ticker

6/recent/ticker-posts

Ad Code

ಮನೆಯೊಳಗೆ ಅತಿಕ್ರಮಿಸಿ 78 ವರ್ಷದ ವೃದ್ದೆಯ ಹಿಡಿಯಲೆತ್ನ; ಆರೋಪಿಯ ಸೆರೆ


 ಮುಳ್ಳೇರಿಯ: ಮನೆಯೊಳಗೆ ಅತಿಕ್ರಮಿಸಿ 78 ವರ್ಷದ ವೃದ್ದೆಯನ್ನು ದುರುದ್ದೇಶದಿಂದ ಅಪ್ಪಿ ಹಿಡಿಯಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮಿಂಚಿಪದವು ನಿವಾಸಿ ವಸಂತ(35) ಬಂಧಿತ ಆರೋಪಿ. ನಿನ (ಬುದವಾರ) ಸಾಯಂಕಾಲ 3.30 ರ ವೇಳೆ ಈ ಘಟನೆ ನಡೆದಿದೆ. ಆದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ ಮನೆಯೊಂದರಲ್ಲಿದ್ದ ವೃದ್ದೆಯನ್ನು ಆರೋಪಿ ಹಿಡಿಯಲು  ಯತ್ನಿಸಿದನೆನ್ನಲಾಗಿದೆ. ಮಹಿಳೆಯ ಬೊಬ್ಬೆ ಕೇಳಿ ನೆರೆಮನೆಯವರು ಓಡಿ ಬಂದಾಗ ಆರೋಪಿ ಪರಾರಿಯಾಗಿದ್ದನು. ಕೂಡಲೇ ಆದೂರು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದೂರು ಎಸ್.ಐ.ವಿನೋದ್ ಕುಮಾರ್ ಹಾಗೂ ತಂಡ ಆಗಮಿಸಿ ಊರವರ ಸಹಕಾರದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರಿಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ

Post a Comment

0 Comments