ಕುಂಬಳೆ : ಕಿದೂರು ಶಿವಶಕ್ತಿ ಆರ್ಟ್ಸ್ ಎಂಡ್ ಸ್ಪೋರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ಸೆ.7ರಂದು (ನಾಳೆ) ಕಿದೂರು ಗದ್ದೆಯಲ್ಲಿ ಕಿದೂರು ಗ್ರಾಮೋತ್ಸವ ವಿವಿಧ ಆಟೋಟ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ 8 ಗಂಟೆಗೆ ಜರಗುವ ಕಾರ್ಯಕ್ರಮವನ್ನು ರಘುರಾಮ ರೈ ಕಿದೂರುಗುತ್ತು ಉದ್ಘಾಟಿಸುವರು. ಕಾಜೂರು ಮಹೇಶ್ ಶೆಟ್ಟಿ ಅಧ್ಯಕ್ಷತೆ ವಹಿಸುವರು.ನಿವೃತ್ತ ಮುಖ್ಯೋಪಾಧ್ಯಾಯ ನರಹರಿ ಪಿ, ಶಂಕರ ರೈ ಮಾಸ್ತರ್, ಕಿದೂರು ಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಕುಮಾರಿ, ಜೀವನಾಥ್ ಜೋಡುಕಟ್ಟೆ ಶುಭಾಶಂಸನೆಗೈಯುವರು. ಕಾರ್ಯಕ್ರಮದಲ್ಲಿ ಸು ಫ್ರಂ ಸೋ ಭಾವ ಖ್ಯಾತಿಯ ಶ್ರೀ ಪುಷ್ಪರಾಜ್ ಬೊಳ್ಳಾರ್ ತುಳು, ಕನ್ನಡ ಚಲನಚಿತ್ರ ನಟ ರಾಜೇಶ್ ಬಂದ್ಯೋಡ್ ಭಾಗವಹಿಸುವರು.
ಬಳಿಕ ವಿವಿಧ ಆಟೋಟ ಸ್ಪರ್ಧೆ ಜರಗಲಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ| ಸದಾಶಿವ ಶೆಟ್ಟಿ ಕುಳೂರು, ಕನ್ಯಾನ,ಕೆ.ಕೆ. ಶೆಟ್ಟಿ ಕುತ್ತಿಕ್ಕಾರು,ಉದ್ಯಮಿ ಗಣೇಶ ರೈ ಗೌರವ ಉಪಸ್ಥಿತರಿರುವರು.
ಶಾಸಕರಾದ ಎಕೆಎಂ ಆಶ್ರಫ್, ಸಿ.ಎಚ್.ಕುಂಞಿಂಬು,ವೇಣುಗೋಪಾಲ ಶೆಟ್ಟಿಭಟ್ಟ ಕೆ,ರಾಷ್ಟ್ರೀಯ ಕಬ್ಬಡಿಪಟು ಜಗದೀಶ ಕುಂಬ್ಳೆ, ರಣಜಿ ಆಟಗಾರ ಚಂದ್ರಶೇಖರ,ಡಿ.ವೈ.ಎಸ್.ಪಿ.ಮನೋಜ್ ಕುಮಾರ್ ಬಹುಮಾನ ವಿತರಿಸುವರು.ಸುಫಲಚಂದ್ರ ನಾಯಕ್, ಮಹೇಶ್ ಚಂದ್ರ ಅಡ್ಯಂತಾಯ,ಕುಂಬಳೆ ಪಂ.ಅಧ್ಯಕ್ಷೆ ಯು.ಪಿ.ತಾಹೀರಾ ಯೂಸ್ ಫ್, ಗ್ರಾ.ಪಂ.ಸದಸ್ಯರಾದ ಪುಷ್ಪಲತಾ ಪಿ.ಕಾಜೂರು, ಸುಬ್ರಹ್ಮಣ್ಯ ಕಳತ್ತೂರು, ಮಂಜುನಾಥ ಅಳ್ಳ ಮಡ್ವ,ಜಯಪ್ರಸಾದ್ ರೈ ಕಾರಿಂಜ ಭಾಗವಹಿಸುವರು. ಈ ಸಂದರ್ಭದಲ್ಲಿ ನಿವೃತ್ತ ಗ್ರಾಮಾಧಿಕಾರಿ ಶಿವರಾಮ ಶೆಟ್ಟಿ ಮಾಣಿಬೆಟ್ಟು,ರಾಷ್ಟ್ರೀಯ ಕಬ್ಬಡಿ ಅಟಗಾರ ಸುಖೇಶ್ ಭಂಡಾರಿ ಕಿದೂರುಗುತ್ತು, ಕೃಷಿಕೆ ಸುಂದರಿ ಕಿದೂರು,ಯಕ್ಷಗಾನ ಕಲಾವಿದ ರಂಜಿತ್ ರೈ ಕಿದೂರು ಇವರನ್ನು ಸನ್ಮಾನಿಸಲಾಗುತ್ತದೆ.
0 Comments