Ticker

6/recent/ticker-posts

Ad Code

ಓಣಂ ಹಬ್ಬದ ಹತ್ತು ದಿನಗಳಲ್ಲಿ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟ


 ತಿರುವನಂತಪುರಂ: ಓಣಂ ಹಬ್ಬದ 10 ದಿನಗಳಲ್ಲಿ ರಾಜ್ಯದ ಸರಕಾರಿ ನಿಯಂತ್ರಿತ ಬಿವರೇಜಸ್ ಮದ್ಯದಂಗಡಿಗಳಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆಯೆಂದು ತಿಳಿದು ಬಂದಿದೆ. ಹತ್ತು ದಿನಗಳಲ್ಲಿ ರಾಜ್ಯದಲ್ಲಿ 826 ಕೋಟಿ ರೂ.ಗಳ ಮದ್ಯ ಮಾರಾಟ ನಡೆದಿದೆ. ಕಳೆದ ವರ್ಷ ಈ ಹತ್ತು ದಿನಗಳಲ್ಲಿ 776  ಕೋಟಿ ರೂ.ಗಳ ಮದ್ಯ ಮಾರಾಟ ನಡೆದಿದ್ದು ಈ ವರ್ಷ 50 ಕೋಟಿ.ರೂ.ಗಳ ಅಧಿಕ ಮಾರಾಟ ನಡೆದಿದೆ. ಓಣಂ ಹಬ್ಬದ ಮೊದಲ ದಿನ ಉತ್ರಾಡಂನಂದು ಒಂದೇ ದಿನ ರಾಜ್ಯದಲ್ಲಿ 137 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಈ ದಿನದಂದು ರಾಜ್ಯದಲ್ಲಿ 126 ಕೋಟಿ ರೂ.ಗಳ ಮದ್ಯ ಮಾರಾಟ ನಡೆದಿತ್ತು. ಉತ್ರಾಡಂ ದಿನದಂದು ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿಯ ಸರಕಾರಿ ಮದ್ಯದಂಗಡಿಯಲ್ಲಿ 1.46 ಕೋಟಿ.ರೂ.ಗಳ ಮದ್ಯ ಮಾರಾಟವಾಗಿದೆ. ಇದಲ್ಲದೆ ಕಾಸರಗೋಡು, ಪಾಲಕ್ಕಾಡ್ ಜಿಲ್ಲೆಗಳಲ್ಲಿ ನರೆ ರಾಜ್ಯಗಳಿಂದ ಮದ್ಯ ಪೂರೈಕೆ ನಡಯುತ್ತು ಇದರ ಲೆಕ್ಕಾಚಾರ ಬೇರೆಯೇ ಆಗಿದೆ

Post a Comment

0 Comments